ಮೂಡಿ ಬರಲಿ ಕನ್ನಡದ ಹೊನಲು

ಅನಂತ್ ಮಹಾಜನ್

cropped-slide06.jpg

ಪ್ರತಿ ಹ್ರುದಯದಲು ಕನ್ನಡದ ದೀಪ ಹಚ್ಚಲು,
ಪ್ರತಿ ಉಸಿರಲು ಕನ್ನಡದ ಬಯಕೆ ಬರಲು,
ಪ್ರತಿ ಎದೆ ಬಡಿತದಲು ಕನ್ನಡದ ಆಸೆ ಚಿಮ್ಮಲು,
ಪ್ರತಿ ದಿನಾಲು ಕನ್ನಡದ ಸೂರ್‍ಯ ಉದಯಿಸಲು,
ಪ್ರತಿ ಕ್ಶಣದಲು ಹರಿಯಲಿ ಕನ್ನಡದ ಹೊನಲು ಹೊನಲು ಹೊನಲು

ಹಕ್ಕಿಗಳ ಚಿಲಿಪಿಲಿ ಸದ್ದು ಕನ್ನಡದಲಿ ಕೇಳಲು,
ನೀಲಿ ಆಕಾಶದಲಿ ಕನ್ನಡದ ಮೋಡ ತೇಲಲು,
ಶುಬ್ರ ನೀರಿನ ಜಲಪಾತ ಕನ್ನಡದ ದಡ ಸೇರಲು,
ಚಂದ್ರನ ತಂಪಾದ ಕಿರಣ ಕನ್ನಡದ ಹ್ರುದಯ ಸ್ಪರ್‍ಶಿಸಲು,
ಬೆಳಕು ಕತ್ತಲೆಗಳಾಚೆ ಮೂಡಿ ಬರಲಿ ಕನ್ನಡದ ಹೊನಲು ಹೊನಲು ಹೊನಲು

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: