ತಿಳಿಸಂಜೆಯಲಿ ಚಂದ್ರನ ಆಗಮನ

ಪುಟ್ಟರಾಜು.ಕೆ.ಎಸ್.

moon-in-evening-sky-1-DHD

ತಿಳಿಸಂಜೆಯಲಿ ಚಂದ್ರನ ಆಗಮನ
ನಡುರಾತ್ರಿಯಲಿ ತಾರೆಗಳೇ ಆಬರಣ
ನನ್ನ ಹ್ರುದಯದಲಿ ನನ್ನ ನಿನ್ನ ಸಮ್ಮಿಲನ
ಯಾಕಾಗಿದೆ ಈ ಅನುಬವ ,ಏತಕೆ ನನ್ನ ಮನಸಲಿ ಈ ಕಲರವ
ನೋಡು ಬಾ ನನ್ನ ಕಲ್ಪನೆಯಾ, ಕೇಳು ಬಾ ಈ ನನ್ನ  ವರ‍್ಣನೆಯ….!! ||ಪಲ್ಲವಿ||

ನೀಲಿ ಆಕಾಶದಲಿ ನೀ ನಡೆದಾಡುವ ಹಾಗೆ
ಮಳೆ ಹನಿಯಾಗಿ ನೀ ನನ್ನ ಮೇಲೆ ಬಿದ್ದ ಹಾಗೆ
ಯಾಕೋ ಏನೋ ಮನವು ನಗುತಿದೆ
ನೀನೆ ಏನೋ ಕಾರಣ, ನಿಜ ನೀನೆ ಅದಕೆ ಕಾರಣ..!!
ನೋಡು ಬಾ ನನ್ನ ಕಲ್ಪನೆಯಾ, ಕೇಳು ಬಾ ಈ ನನ್ನ ವರ‍್ಣನೆಯ…!! |1|

ನಗುವ ಹೂವ ಮರೆತಿರುವೆ, ನಲಿವ ಹೂವಲಿ ನಿನ್ನ ನಾ ಕಾಣುತಿರುವೆ
ಏನಾದರು ನೀ ನನ್ನವಳೆ, ಏಕೆಂದರೆ ನೀ ನನ್ನವಳೇ..!!
ನಿನ್ನ ಹ್ರುದಯದ ಬಾಗಿಲಲಿ ಕಾದಿರುವೆ ಒಮ್ಮೆ ನೋಡೆಯ
ನಿನ್ನ ಮನಸಿನ ಕಡಲಿಗೆ ನದಿಯಾಗಿ ಹರಿಸುವೆ ನನ್ನ ಪ್ರೀತಿಯ
ನೋಡು ಬಾ ನನ್ನ ಕಲ್ಪನೆಯ, ಕೇಳು ಬಾ ನನ್ನ ಈ ವರ್‍ಣನೆಯ…!! |2|

(ಚಿತ್ರ: http://gallery.hd.org)

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. Very nice one puttu!!!!!!!!!!!!!! Keep up your writing ……………. I expect one of your song should be used in any of the kannada movie shortly 🙂 I wish you all the very success in this journey …… Keep going my dear friend…….

  2. Puttu Raj says:

    Thank u Raj…:)

  3. nice one puttu as usual 🙂 keep it going 😀

  4. Puttu Raj says:

    thank u seems…:)

ಅನಿಸಿಕೆ ಬರೆಯಿರಿ: