ಆಸೆ

– ವಿಬಾ ರಮೇಶ್

2dyVKUq

ಬಾನಂಗಳದಿ ಗರ್‍ಜಿಸುವ
ಮೋಡಗಳು, ಕರಗಿ
ಸುರಿವ ಮಳೆಯ –
ಹನಿ ಮುತ್ತಾಗುವಾಸೆ

ಮಣ್ಣ ಒಡಲ ಹೊಕ್ಕಿ
ಬೀಜಕ್ಕೆ ಚಯ್ತನ್ಯವಾಗಿ
ಚಿಗುರೊಡೆದು, ಬೇರೂರಿ
ಹೆಮ್ಮರವಾಗುವಾಸೆ

ಮರದ ನೆರಳಲಿ
ಕುಳಿತ ಗೊಲ್ಲನ
ಕೊಳಲ ದನಿಗೆ
ತಲೆದೂಗುವಾಸೆ

ಆ ಮಾಂತ್ರಿಕನ
ಸ್ರುಶ್ಟಿಯ ವಯ್ಬವ
ಮೂಕ ವಿಸ್ಮಿತನಾಗಿ
ಆಸ್ವಾದಿಸುವಾಸೆ

(ಚಿತ್ರ: http://m.rgbimg.com/)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.