ಸವಿಕುಡಿಗೆ

 ಸಂದೀಪ್ ಕಂಬಿ.

sini_gal_birdbug_11

ಬೀಸುರೆಕ್ಕೆಗಳ
ನಿಲ್ಲದ ಚಡಪಡಿಕೆ.
ಬಗೆಯಲಿ ಪುಟಿದ ಕದಲಿಕೆಗಳ
ಬಿರುಸಿನ ಹೊರಪುಟಿಕೆಯಂತೆ.
ಸೆಳೆಯಿತು,
ಮೆಲು ಗಾಳಿಯಲಿ ಪಸರಿದ
ನಿನ್ನ ನರೆಮಯ್ಯ ಗಮಲು.
ಹೆಚ್ಚಿತು ಅಮಲು.
ಹಾರಿ ನಿನ್ನೆಡೆಗೆ,
ತಡವಿ ನಿನ್ನೊಡಲ,
ಹಿಡಿದು ಮೇಲೆತ್ತಿ
ನಾಚಿದ ನಿನ್ನ ಮೊಗವ.
ಸಿಹಿಯ ಮೊರೆಯಿಡಲು,
ಬಿರಿದು ನಿನ್ನ ಮೆದುವೆಸಳ,
ಉಣಿಸಿದೆ ನೀನೆನಗೆ
ಜೇನ ಹನಿಗಳ ಸವಿಕುಡಿಗೆ.
ತಣಿಸಿದೆ ತಲ್ಲಣಗಳ!
ಬಿಗಿದುಸಿರು, ಈಗ ನಿಟ್ಟುಸಿರು!

(ಚಿತ್ರ: http://universini.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: