ಪರಂತು ಅಯ್ಯ?

ಶ್ರೀನಿವಾಸಮೂರ‍್ತಿ ಬಿ.ಜಿ
ರಲ್ಲಿ ರಲ್ಲಿ ಪರಂತು ಯಾವ ಯಾವುಗಳಲ್ಲಿ?
ಕರ್‍ನಾಟಕ ಉಚ್ಚ ನ್ಯಾಯಾಲಯ ಅದಿನಿಯಮ, 1961 ?
ಇದರಲ್ಲೂ ಪರಂತು’ಗಳು ಇವೆ.
ಕರ್‍ನಾಟಕ ಗ್ರುಹನಿರ್‍ಮಾಣ ಮಂಡಲಿ ಅದಿನಿಯಮ, 1962 ?
ಇದರಲ್ಲೂ ಪರಂತು’ಗಳು ಇವೆ!
ಕನ್ನಡ ಅಬಿವ್ರುದ್ದಿ ಪ್ರಾದಿಕಾರ ಅದಿನಿಯಮ, 1994 ?
ಇದರಲ್ಲೂ ಪರಂತು’ಗಳು ಇವೆಯೇ? ಹವ್ದು!
ಕರ್‍ನಾಟಕ ನಾಗರಿಕರಿಗೆ ಸೇವೆಗಳ ಕಾತರಿ ವಿದೇಯಕ, 2011 ?
ಇದರಲ್ಲೂ ಪರಂತು’ಗಳು ಇವೆ? ಊ! ಊಊಊ!
ಕರ್‍ನಾಟಕ ರಾಜಬಾಶಾ ಅದಿನಿಯಮ, 1963 ?
ಕೆದಕಿ ನೋಡಿಲ್ಲ ನಾ!
ಇನ್ನು ಯಾವ ಯಾವುಗಳಲ್ಲಿವೆ?
ಕೆದಕಿ ನೋಡು ನೀ!

ಪರಂತು ಪರಂತು ಅಪ್ಪಟ ಕನ್ನಡದ್ದು ಇಲ್ಲವೇ?
ಅಪ್ಪಟ ಕನ್ನಡ ಪಟ್ಟದ ಮೇಲಿದ್ದ ‘ಆದರೆ’ ಯನ್ನು ಮರೆಗೊಳಿಸಿ ಅಪ್ಪಟ ಕನ್ನಡವಾಗಿರುವೆ.
ನೀನು ತೊಲಗಲು ಏನ ಮಾಡಲಯ್ಯ ಪರಂತು ಅಯ್ಯ?
ಈಗಿಂದೀಗಲೆ ನನ್ನ ಪರ್ ಎನಿಸಿ ಅಪ್ಪಟ ಕನ್ನಡದ್ದನ್ನು ಕೂರಿಸು.
ಅದು ಬಲು ಕಶ್ಟ ಪರಂತು ಅಯ್ಯ
ಕಶ್ಟ? ಕಶ್ಟ! ಅಂತ ಕೂತರೆ ಕನ್ನಡಕ್ಕೆ ನೀ ಎಳೆಯ ಬೇಕಾದೀತೋ ತೆರೆ!
ಪರಂತು ಅಯ್ಯ ನಿನ್ನ ಬೆಂಬಲಿಗರೂ ಕನ್ನಡದ್ದನ್ನು ಒಪ್ಪುವರೇ?
‘ಆದರೆ’ ಯನ್ನು ಬಿಟ್ಟರೆ ನಿನ್ನ ಉಳಿವು ಅಳಿವಿನ ಹಳಿಗೆ ಸಾಗುವುದೋ ಮೂಡ!
ನಿನ್ನ ಕೊನೆಯ ಮಾತು ಏನು ಪರಂತು ಅಯ್ಯ?
ಕನ್ನಡದೊಳ್ ಅಪ್ಪಟ ಕನ್ನಡ ಪದಗಳನ್ ಬೆರಸಿ-
ಬೇರುಗೊಳಿಸಿ ಕಲಿಜಾಣರ್‍ಗೆ ಹೊಲಿದು ಅವರನ್ ಕನ್ನಡದ ಹುಲಿಯಾಗಿಸು.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *