ಬೀಳುತ್ತಿರುವ ರೂಪಾಯಿ: ನೀವೇನು ಮಾಡಬಹುದು?
ಮವ್ನವಾಗಿ ರೂಪಾಯಿಯ ಬಿಕ್ಕಟ್ಟನ್ನು ಪ್ರತಿಬಟಿಸಲು ಎಲ್ಲರು ಒಪ್ಪುವ ವಯಕ್ತಿಕ ನೆಲೆಯ ಪ್ರತಿಬಟನೆಯನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವು ಅನುಸರಿಸಬಹುದಾದ ಹೆಜ್ಜೆಗಳನ್ನು ಇಲ್ಲಿ ಬರೆದಿದ್ದೇನೆ. ನೀವೂ ಇನ್ನಶ್ಟು ಸೇರಿಸಬಹುದು/ತಿದ್ದುಪಡಿಗೊಳಿಸಬಹುದು.
- ಪ್ರತಿ ದಿನದ ಸುದ್ದಿಯಲ್ಲಿ ರೂಪಾಯಿ ಎಶ್ಟರಲ್ಲಿದೆ ಎಂಬುವುದನ್ನು ಅರಿಯಿರಿ. ಪ್ರಯಾಣಿಸುವಾಗ ಮಂದಿಯೊಡನೆ ಈ ಬಗ್ಗೆ ಮಾತನಾಡಿ.
- ವಾರಕ್ಕೊಮ್ಮೆಯಾದರೂ ರೂಪಾಯಿ ಎಶ್ಟರಲ್ಲಿದೆಯೋ ಅಶ್ಟನ್ನು ಮಾತ್ರ ಮನೆಯಿಂದ ಹೊರಗೆ ಬರುವಾಗ ಅದನ್ನು ತೆಗೆದುಕೊಂಡು ಹೊರಡಿ. ಅಂದಾಜು 30 ಕಿ.ಮಿ ದೂರ ಪ್ರಯಾಣಿಗರಿಗೆ ಇದು ಕಶ್ಟ ಆದರೂ ಇದು ನಾಡಿಗೆ ಒಳಿತು.
- ಎತ್ತುಗೆಗೆ: 67 ಇದ್ದ ರುಪಾಯಿ ಕುಸಿದು 68ಕ್ಕೆ ಏರಿದರೆ ಕೇವಲ 1ರೂ ವನ್ನು ಮಾತ್ರ ಬೇರೆಯವರಿಂದ ಲಜ್ಜೆ ಬಿಟ್ಟು ಪಡೆಯಿರಿ.
- ಎತ್ತುಗೆಗೆ: 67 ಇದ್ದ ರುಪಾಯಿ ಚೇತರಿಕೆಗೊಂಡು 65ಕ್ಕೆ ಇಳಿದರೆ ಉಳಿದ 2ರೂ ವನ್ನು ಹುಂಡಿಗೆ ಹಾಕುವುದನ್ನೋ/ದುಡ್ಡಿಲ್ಲದವರಿಗೋ ಕೊಡಿ.
- ಆಳ್ವಿಕೆಯ ಕೂಟಗಳಲ್ಲಿನ ಮಂದಿ ಸುತ್ತ ಇರುವವರು ಆ ಕೂಟಗಳ ಮಂದಿಗಳಿಂದಲೇ 3 ಹಾಗೂ 4 ರ ಹೆಜ್ಜೆಗಳಲ್ಲಿ ತಿಳಿಸಿದಂತೆ ಮಾಡುವುದು ಒಳಿತು.
- ಸರ್ಕಾರಿ /ಕಾಸಗಿ ಕೆಲಸಗಾರರು ಹಾಜರಾತಿ ಹೊತ್ತಗೆಯಲ್ಲಿ ಹಣವನ್ನು ಬರೆಯಬೇಕಾದರೆ ಸುದ್ದಿಯಲ್ಲಿ ನಮ್ಮ ದೇಶದ ರುಪಾಯಿ ಮಟ್ಟ ಎಶ್ಟಿದೆಯೋ ಅಶ್ಟನ್ನು ಕಚೇರಿಗೂ ತಂದು ಅಶ್ಟೇ ಹಣವನ್ನು ಬರೆಯಿರಿ. ದಿನಾಲು ಆಗದಿದ್ದರೆ ವಾರಕ್ಕೊಮ್ಮೆ ಇದನ್ನು ಅನುಸರಿಸಿ.
- ಯಾವ ಆಳ್ವಿಕೆ ಕೂಟಕ್ಕೆ ಸೇರದವರು ಆಳ್ವಿಕೆ ಕೂಟಗಳ ನೆರವಾಳ್ಗಳೊಡನೆ ಹೆಜ್ಜೆ 3 ಹಾಗೂ 4ರಲ್ಲಿ ತಿಳಿಸಿದಂತೆ ಅನುಸರಿಸಿ. ಇದರಿಂದ ಆ ಕೂಟಗಳ ನೆರವಾಳ್ಗಳಿಗೂ ಆಳ್ವಿಕೆ ಕೂಟಗಳ ಮೇಲೆ ಕೊಂಚವಾದರೂ ಬೇಸರ ಉಂಟಾಗುವುದು
- ಮಕ್ಕಳಿಗೆ ಹಣವನ್ನು ಕೊಡುವಾಗ ರುಪಾಯಿ ಚೇತರಿಕೆಗೊಳ್ಳುವ ತನಕ ರುಪಾಯಿಯ ಮಟ್ಟವಿದ್ದಶ್ಟೇ ಕೊಡಿ. ಅವರಿಗೂ ಈ ಬಿಕ್ಕಟ್ಟಿನ ಅನಾಹುತಗಳ ಬಗ್ಗೆ ತಿಳಿಸಿ.
ದಾಸ್ಯದಿಂದ ಬಿಡುಗಡೆಗೊಂಡಾಗಿನಿಂದ ಕಾಳಜಿಯಿಂದ ನಾಡಿಗಾಗಿ ಆಳ್ವಿಗ ಮಂದಿಗಳಾರು ರಕ್ಶಣಾತ್ಮಕವಾಗಿ ಪ್ರಯತ್ನಿಸಲೇ ಇಲ್ಲ. ಒಂದು ವೇಳೆ ಅವರು ಯತ್ನಿಸಿಯೇ ಆಗಿದ್ದಲ್ಲಿ ನಾವು ಪರೋಕ್ಶ ಸಾಲದ ಗುಲಾಮಿಗಳಾಗುತ್ತಿರಲಿಲ್ಲ. ಬಿಟ್ಟಿ ಸೇವೆಗಳನ್ನು ನೀಡುತ್ತಾ ಬೊಕ್ಕಸದ ಮೇಲೆ ಹತೋಟಿ ಗಳಿಸುತ್ತಾ ಕಾಯಂ ಮತದಾರರನ್ನು ಹೊಂದಲು ಈ ಪೊಳ್ಳುಗರಿಗೆ ಅದು ಹೇಗೆ ಮನಸ್ಸಾಯಿತೋ ಆತನೇ ಬಲ್ಲ. ಆಳ್ವಿಕೆಯ ಮಂದಿಗಳು ಗಾಂದೀಜಿಯ ದಾರಿಗರು ಆಗಿದ್ದಿದ್ದರೆ ಯಾವಾಗಲು ಅಮೆರಿಕಾ ಅಮೆರಿಕಾ ಅಂತ ಬೀಗುತ್ತಾ ದೇಶದ ಬಿಗವನ್ನೇ ಅವರಿಗೆ ನೀಡುತ್ತಿರಲಿಲ್ಲ. ಒಂದು ವೇಳೆ ನಾವು ಮತ್ತೆ ದಾಸ್ಯಕ್ಕೆ ಈಡಾದರೆ ಮತ್ತೆ ಅದರಿಂದ ಬಿಡುಗಡೆ ಹೊಂದಲು ನಮ್ಮಲ್ಲಿನ ಪ್ರಜ್ನಾವಂತರು ಮಂದಿಗಳನ್ನು ಹೊಂದಿಸಲು ಯತ್ನಿಸಿದರೆ ನಮ್ಮಯ ಮಂದಿಗಳು ನಮ್ಮವರಿಗೆ ಹೊಂದಿಕೆಯೇ ಆಗುವುದಿಲ್ಲ.
ಮುಂದೆ ನಮ್ಮವರನ್ನೇ ನಮ್ಮವರಲ್ಲಿ ಪರಕೀಯ ಬಾವನೆ ಉಂಟಾಗುವಂತೆ ಮಾಡುವಂತಹ ಬಲೆಯನ್ನು ಈಗಾಗಲೆ ಆ ನಾಡುಗಳು, ಆ ನಾಡುಗಳಿಂದ ಬಂದಿರುವವರು ಇಲ್ಲಿಯವರನ್ನು ಕೊಂಡು ಹೆಣೆಯುತ್ತಿದ್ದಾರೆ. ಸುಮ್ಮನೆ ಅವರು ಈ ರೀತಿಯ ಬಲೆಯನ್ನು ಹೆಣೆಯುತ್ತಿಲ್ಲ. ನಮ್ಮಲ್ಲಿನ ಎದೆಗಾರಿಕೆಯ ಕೊರತೆಯನ್ನು ಅರಿತು ಹೇನನ್ನು ಸಾಯಿಸಲು ಅವರ ಬಲೆಗೆನೆ ನಮ್ಮಿಂದಲೇ ಹಣವಾಕಿಸಿಕೊಳ್ಳುವಂತಹ ಬಲೆಯನ್ನು ಹೆಣೆದು ನಮ್ಮನ್ನು ಮತ್ತೆ ಏಳದಂತೆ ಮಾಡುವ ಕೆಲಸಗಳಿಗೆ ಈಗಾಗಲೆ ಅವರು ನಾಂದಿ ಹಾಕಿದ್ದಾರೆ. ಹಿಂದೆಲ್ಲಾ ಪಡೆದ ಪಾಡುಗಳನ್ನು ಬಳಸಲು ಸೋತಿರುವ ಆಳ್ವಿಗರು ನಾಡನ್ನು ಸಾಯಿಸುವವರ ಕೂಟದೊಳಗೆ ಹೆಸಳಾಗಿ ಮಿಂಚುತ್ತಿದ್ದಾರೆ ಅಶ್ಟೆ. ಈ ಆಳ್ವಿಗರು ಹಾ!ಅವರಿಗೆ ಹಾಗೂ ನಮ್ಮೊಡನೆ ನೇರವಾಗಿ ಬಳಕೆಯಾಗುತ್ತಿರುವ ಮೂರ್ಕ ದಾಳಗಳು. ಅವರು ಹಾಳಾಗಿ ಹೋಗಲಿ ಬಿಡಿ. ಈ ಮೇಲೆ ಬರೆದ 8 ಹೆಜ್ಜೆಗಳನ್ನಾದರೂ ಪಾಲಿಸುವ ಮೂಲಕ ನಮ್ಮಯ ಹೊತ್ತುಗಳನ್ನು ಉಳಿಸಿಕೊಂಡು ರುಪಾಯಿಯ ಮಟ್ಟದ ಚೇತರಿಕೆಗೆ ವಯಕ್ತಿಕವಾಗಿ ಮುಂದಾಗೋಣ. ಇವು ನಿಮ್ಮಿಂದಾದರೆ ನಾಡಿನ ಉಳಿವಿಗೆ ವಯಕ್ತಿಕ ಕೊಡುಗೆ ಸೇರುತ್ತದೆ.
(ಚಿತ್ರ: ಎಕನಾಮಿಕ್ಸ್ ಟಾಯ್ಮ್ಸ್)
ಇತ್ತೀಚಿನ ಅನಿಸಿಕೆಗಳು