ಮೂರು ಚುಟುಕಗಳು

ಸಿದ್ದೇಗವ್ಡ

IMG_1262

1. ಬದುಕು

ದೂರದೂರಿನ ಗುರಿಯ
ತಲುಪುವಾದಿಯಲಿ
ಕೆಲವರು ಮುಂದೆ
ಹಲವರು ಹಿಂದೆ
ನಂತರ ಎಲ್ಲಾ ಒಂದೆ.

2. ಸೂಕ್ಶ್ಮ

ಈ ಹ್ರುದಯವೇಕಿಶ್ಟು
ಸೂಕ್ಶ್ಮ?
ನಿಜದ ಪ್ರೇಮದ ನಿರೀಕ್ಶೆಯಲ್ಲಿ
ನರಳಿ, ನರಳಿ
ಒಲವ ಹೂ ಕೊನೆಗೂ ಅರಳದೆ
ನೋವಿನಾಳದಲ್ಲಿ ಮುಳುಗಿ
ಮೇಲೇಳಲಾಗದೇ
ಅಲ್ಲೇ ಬಸ್ಮ.

3. ವ್ಯಾಲಂಟಯ್ನ್ಸ್ ಡೇ

ಕೇಳಿದೆ
ವ್ಯಾಲಂಟಯ್ನ್ಸ್ ಡೇ ಗೆ ಒಂದು ಕಾಣಿಕೆ
ಎವೆರಿಡೇ
ಮಯ್ಸೂರು ಮಲ್ಲಿಗೆಯ ಮುಡಿವವಳೇ
ಕೇಳು ನನ್ನದೂ ಇದೆ ಒಂದು ಕೋರಿಕೆ
ಪ್ರೇಮಪೂಸಿತ, ವಿಶ್ವ ವಿಸ್ಮಿತ
ತಾಜಮಹಲಿಗೇ ಇಲ್ಲದಿರುವಾಗ ಡೇ
ನಮಗೇಕೆ ವ್ಯಾಲಂಟಯ್ನ್ಸ್ ಡೇ?

(ಚಿತ್ರ: briefsojourn.blogspot.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Oh..Gowda.. photography,Cinematography,music,proffession,Family,hats off to your time management.Baduku is just wonderful.Keep it up friend.

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *