ಪತ್ರಕರ‍್ತನ ಬದುಕು!

– ಅಜಯ್ ರಾಜ್.

cartoon-journalist

ಪತ್ರಕರ‍್ತನ ಬದುಕಿದು
ಅಲೆಮಾರಿಯ ಅಂತರಂಗ
ಕೊಂಚ ಹಾದಿ ತಪ್ಪಿದರೂ
ಬದುಕು ನೀರವತೆಯ ರಣರಂಗ

ಸದಾ ಸುದ್ದಿಯ ಬೆನ್ನಟ್ಟುವ
ತವಕ
ನರನಾಡಿಯಲಿ ಕಂಪಿಸುವುದು
ಕಾಯಕದ ನಡುಕ

ನಡುಕವೋ, ನಾಟಕವೋ
ಕುಹಕವೋ, ಸಂಕಟವೋ
ವ್ರುತ್ತಿ ಬದುಕಿದು
ವಿಬಿನ್ನತೆಯ ವಿಹಂಗಮ ನೋಟ

ಅಗೋ ಅಲ್ಲೊಂದು, ಇಗೋ ಇಲ್ಲೊಂದು
ಮತ್ತೊಂದು, ಮಗದೊಂದು, ಸಂಜೆಯಲಿ ನೊಂದು
ಬಸವಳಿದು ಬಂದು
ಇವುಗಳೇ ಅವನ ಕೇಂದ್ರ ಬಿಂದು

ಕಚ್ಚಾಟಗಳು, ಹೋರಾಟಗಳು
ದ್ರುತಿಗೆಡಿಸಲೊಲ್ಲವು
ಪ್ರಜೆಗಳಾಳುವವರ ಗದರಿಕೆ, ಬೆದರಿಕೆ
ಇವನ ಮುಂದೆ ಗೆಲ್ಲವು

ಪತ್ರಿಕೋದ್ಯಮ ಪ್ರಜಾಪ್ರಬುತ್ವದ
ಕಾವಲು ನಾಯಿ
ಪತ್ರಕರ‍್ತ
ದ್ರುಡ ಸಂಕಲ್ಪದ ಸ್ತಾಯಿ

ಹೊಡೆದು, ಬಡಿದು ರಕ್ತ ಚೆಲ್ಲುವವನಲ್ಲ
ಹಿಂಸಾಚಾರಕ್ಕೆ ಕುಮ್ಮಕ್ಕಿಲ್ಲ
ಮಾರ‍್ದನಿಸುವುದು ಲೇಕನಿ
ಚೆಲ್ಲಿ ಮಸಿಯ ಹನಿ

ಪತ್ರಕರ‍್ತನ ಲೇಕನಿ ಬರೀ ಲೇಕನಿಯಲ್ಲ
ಹುಳುಕುಗಳ ಸುಡುವ ಸಮರಾಗ್ನಿ
ಬಹುದೂರವಿದೆ ಪಯಣ
ನೂರಾರು ಹರಿದಾರಿಗಳ ದಟ್ಟ ಕಾನನ

ಸರಹದ್ದುಗಳನ್ನು ಮೀರಿದ
ಕರೆ ನಿನ್ನದು
ಸರ‍್ವ ರುತುಗಳಲೂ ಸಂಚಲಿಸುವ
ನೈಪುಣ್ಯತೆ ನಿನ್ನದು

ಪಸರಿಸಲಿ ಪತ್ರಿಕೋದ್ಯಮದ ಬೆಳಕು
ದೂರ ದಿಗಂತದಾಚೆಗೆ
ಉರಿಯುತ್ತಿರಲಿ ನಿರಂತರ
ಶುರುವಾಗಲಿ ಹೊಸ ಮನ್ವಂತರ

( ಚಿತ್ರ ಸೆಲೆ: cg.ukwebdev.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: