ನಿದ್ದೆಯ ನೆನಪಿನಾಟ

– ಶ್ರೀಕಿಶನ್ ಬಿ. ಎಂ.

Memorypinball

‘ಕುಗುರು’, ‘ನಿದ್ದೆ’ ಅನ್ನುವುದು ನಮ್ಮ ಎಂದಿನ ಕೆಲಸಗಳ ತಿಟ್ಟದಿಂದ ಬೇರ‍್ಪಡಿಸಲಾಗದ ಒಂದು ಅಂಗ. ನಾವು ನಮ್ಮ ಬಾಳಿನ ಮೂರನೆಯೊಂದು ಬಾಗವನ್ನು ಕುಗುರಿನಿಂದ ಕಳೆಯುತ್ತೇವೆ. ಆದರೆ ಕನಸುಗಳ ಗುಟ್ಟುಗಳು, ಮುಚ್ಚುಮರೆಗಳ ಕುರಿತಾಗಿ ಹಗಲೆಲ್ಲಾ ನೆನೆದು ಆರಯ್ಯುವ ನಾವು, ಕುಗುರಿನ ಚಟುವಟಿಕೆಯ ಬಗ್ಗೆ ಅಶ್ಟಾಗಿ ಯೋಚಿಸೆವು. ಅದರ ಬಗ್ಗೆ ಅರಕೆ ಮಾಡುವವರಿಗೂ ಅದು ಹೆಚ್ಚು ಕಮ್ಮಿ ಗುಟ್ಟಾಗಿಯೇ ಉಳಿದಿದೆ. ಗಡುಕಡತ (magazine)ವೊಂದರಲ್ಲಿ (ವೀಕೆಂಡ್ ಎಡಿಶನ್ ಸಂಡೆ) ಇದರ ಬಗ್ಗೆ ಕೆಲ ಅಡಿಮಟ್ಟದ ಸಿಕ್ಕಲಿನ ಕೇಳ್ವಿಗಳು, ಹೊಳಹುಗಳು ಇಂತಿವೆ.

ಡಾ.ಮ್ಯಾತ್ಯೂ ವಾಕರ್‍ ಎಂಬಾತ ಹೇಳುವಂತೆ, ನಾವೇಕೆ ಒರಗುತ್ತೇವೆ? ಎನ್ನುವುದು ಒಂದು ಎಂದಿನ, ಮಾರ್‍ಪಿನ ಪ್ರಶ್ನೆಯಾಗೇ ಉಳಿದಿದೆ. ಕ್ಯಾಲಿಪೋರ್‍ನಿಯ ಅರಕೆವೀಡು, ಬರ್‍ಕಲಿಯಲ್ಲಿ ಮೇಲಾಳು ಅರಕೆಗಾರರಾಗಿರುವ ವಾಕರ್‍ ಅವರು ನಿದ್ದೆ ನಂಟಿನ ಓಜೆತಪ್ಪುವಿಕೆಗಳಿಂದ (sleep related abnormality) ಪಾಡುಪಟ್ಟ ಕುತ್ತಿಗರಿಗೆ ನೆರವಾಗುತ್ತಾರೆ. ಇವರು ಹೇಳುವಂತೆ ನಿದ್ದೆಯನ್ನು ಅರಿಯಲು, ಅದರ ಸುತ್ತ ಇರುವ ತೊಡರು-ಸಿಕ್ಕುಗಳು ಇದರ ಮೇಲ್ಪಟ್ಟ ಅರಕೆಯನ್ನು ಮತ್ತಶ್ಟು ಹುರುಪುಗೊಳಿಸುವುದಂತೆ.

ಅರಿಮೆ ಬಯಲಿನಲ್ಲಿ ಅಣುತಂಡದ ಉಸಿರರಿಮೆ (molecular biology), ಪೀಳಿಯರಿಮೆ (genetics) ಇವುಗಳ ಕುರಿತಾಗಿ ಹಲವಾರು ಕಂಡುಹಿಡಿಕೆಗಳು ಹೊರಚೆಲ್ಲಿದ್ದರೂ, ಇವುಗಳ ನೆರವಿನಿಂದಲೂ ಸುತ್ತಲಿನ ಸಿಕ್ಕನ್ನು ಬಿಡಿಸಿಕೊಳ್ಳಲು ಕಶ್ಟವಾಗಿದೆ. ಹೀಗಿದ್ದರೂ ನಿದ್ದೆಯ ಗುಣದ ಮೇಲ್ಮೆಯ ಬಗ್ಗೆ ಬೆಳಕು ಚೆಲ್ಲುವ ಸಾಕಶ್ಟು ಕಂಡುಹಿಡಿಕೆಗಳು ಈ ನಿಟ್ಟಿನಲ್ಲಿ ಮೂಡಿಬಂದಿವೆ. ಒಸಗೆಗಳನ್ನು, ಸುದ್ದಿ-ಹೇಳಾಣಿಕೆಗಳನ್ನು (information) ತಿಳಿಯುವ ಹಾಗು ಉಳಿಸಿಕೊಳ್ಳುವ ಸಲುವಾಗಿ ನಿದ್ದೆಯ ಪಾತ್ರ ತಿಳಿದುಬರುತ್ತದೆ. ಅಲ್ಲದೆ ನಿದ್ದೆಯ ಕೊರೆತೆಯಿಂದ ಉಂಟಾಗುವ ತೊಡಕಿನ ಆಗುಹಗಳನ್ನೂ ಈ ಅರಕೆಗಳು ಗಮನಿಸುತ್ತಿವೆ.

ಕಲಿಕೆಯ ಕುರಿತಾದ ಅರಕೆ-ಅದ್ಯಯನಗಳು ಹೇಳುವಂತೆ, ನೆನಪಿನ ಪರಿಜಾಗುವಿಕೆ (memory formation), ನೆನಪಿನ ಪರಿಶ್ಕರಣೆ (memory processing ) ಹಾಗು ನಿಡಿದೇಡಿನ ನೆನಪು ಉಳಿಸಿಡುವಿಕೆ (long-term memory retention) ಇವುಗಳ ಎಲ್ಲ ಹಂತಗಳಲ್ಲೂ ನಿದ್ದೆ ಕಡು ಅರಿದಾಗಿರುತ್ತದೆ. ನಿದ್ದೆಯು ಮನುಶ್ಯನ ಹೊಸೆಯಬಲ್ಲ ಅಳವನ್ನು (creative ability) ಆರಯ್ಸುವ ಬಗೆಗಿನ ಹೊಳಹುಗಳು, ನಿಲುವುಗಳು ಹಿಂದಿನರಿಮೆಯ ಕತೆಗಳಿಂದ ಬಂದದ್ದುಂಟು. ಇಂದು ಅರಿಮೆ ಅದಕ್ಕೆ ಅರಕೆಗಳ ಪೊರೆತ ನೀಡುವುದನ್ನು ನಾವು ಕಾಣುವೆವು.

ಕಟ್ಟುಗೆತನಕ್ಕೆ ಸಂಬಂದಪಟ್ಟ ನೆನಪಿನ ಪರಿಶ್ಕರಣೆಯು, ಹೊಸದಾದ ಹೇಳಾಣಿಕೆಗಳ ತುಣುಕುಗಳನ್ನು ಆಯ್ದುಕೊಳ್ಳುತ್ತದೆ. ಇತ್ತೀಚಿನ ತಿಳಿಕೆತುಣುಕುಗಳು ಹಾಗು ಹಿಂದಿನಿಂದ ಮಿದುಳಲ್ಲಿ ಕೂಡಿಡಲ್ಪಟ್ಟ ಎಲ್ಲ ತಿಳಿಕೆತುಣುಕುಗಳಿಗೆ ಇರಬಹುದಾದ ಕೊಂಡಿಗಳನ್ನು ಒರೆಹಚ್ಚಿ ನೋಡುತ್ತದೆ.  ಹೀಗಾಗಿ ಒಂದು ಬಗೆಯ ನೆನಪಿನ ‘pinball’ ಆಟದಂತೆ ತಿಳಿಕೆಯ ತುಣುಕುಗಳು ಆಚೀಚೆ ಚಿಮ್ಮುತ್ತ ಪುಟಿಯುತ್ತ ಎಲ್ಲೆಲ್ಲಿ ಕೊಂಡಿಗಳು ಕಟ್ಟಬಹುದೆಂದು ನೋಡುತ್ತಿರುತ್ತವೆ.

ಹೀಗಿರಲು ‘ನಿದಿರೆಯ ಮಾಡದಿರೆ’ ಏನಾಗುತ್ತದೆ? ಮಿದುಳಿನ ಹಾಗೂ ಒಡಲಿನ ಕೆಲಸಗಳ ಒಂದು ಇಡೀ ಹೆಬ್ಬಿಂಡು ಹದಗೆಡುವಿಕೆಗೆ ಒಳಗಾಗುವುದು ಎನ್ನುತ್ತಾರೆ ಅರಿವಿಗರು. ನಿದ್ದೆಯ ಕೊರತೆಯಲ್ಲಿ ಮಿದುಳಿಗೆ ಹೊಸ ತಿಳಿಕೆಗಳನ್ನು ತೆಗೆದುಕೊಳ್ಳುವ ಅಳವು ಕಡಿಮೆಯಾಗುವುದಲ್ಲದೆ ಇತ್ತೀಚೆಗೆ ತಿಳಿದುಕೊಂಡಿದ್ದ ತಿಳಿಕೆಗಳನ್ನು ಉಳಿಸಿಕೊಳ್ಳುವ ಶಕ್ತಿ ಕುಗ್ಗುತ್ತದೆ. ಒಳತೆಗೆದುಕೊಂಡ ವಿಶಯಗಳು ಹಿಡಿದಿಡಲಾಗದೆ ಸೋರಿಹೋಗುತ್ತವೆ. ಇದರ ಜೊತೆಗೆ ಮನಸ್ಸಿನ ಕೋರನಿಸಿಕೆಗಳ (emotion ), ಉದ್ವೇಗಗಳ ಸರಿದೂಗಿಕೆಗೆ ನಿದ್ದೆಯಿಲ್ಲದಿರುವಿಕೆಯು ತೊಡಕುಗಳನ್ನು ತಂದೊಡ್ಡುತ್ತದೆ.

ಉಸಿರು ಹೊಮ್ಮುಕೆಯರಿಮೆಯ (evolution) ನೋಟದಿಂದ ನೋಡಿದರೆ ಉಸಿರುಳಿವಿನ ಹುಟ್ಟೊಲವುಗಳು (survival instincts) ಅಶ್ಟಾಗಿ ಮೂಡದ ಸಲುವಾಗಿ ನಿದ್ದೆಗೆ ಅಶ್ಟು ಬೆಲೆ ಕಾಣದು. ಆದರೆ ಉಸಿರು ಹೊಮ್ಮುಕೆಯ ಹಾದಿಯ ಉದ್ದಕ್ಕೂ ನಿದ್ದೆಯನ್ನುವುದು ಅಚ್ಚಳಿಯದೆ ಇರುವುದನ್ನು ನೋಡಿದಾಗ ಅದರ ಹೆಚ್ಚುಗಾರಿಕೆ ಕಾಣುತ್ತದೆ.

ಒಟ್ಟಾರೆಯಾಗಿ, ನಿದ್ದೆಯು ಕೊಡುವ ಹಲವು ಸೋಜಿಗದ ಸಲುಗೆಗಳು, ಉಂಟು ಮಾಡುವ ಒಳಿತುಗಳು, ಅದರ ಮರೆಕೆಡುಕುಗಳನ್ನು ಸಾಕಶ್ಟು ಮೀರುತ್ತದೆ ಎನ್ನುವುದು ಅರಕೆಗಾರರ ನಿಲುವಾಗಿದೆ.

(ತಿಳಿವಿನ ಸೆಲೆ: npr.orgತಿಟ್ಟದ ಸೆಲೆ: huffingtonpost)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.