ಬದುಕು

ಮೇಗನಾ ಕೆ.ವಿ

life1

ಬಾವನೆಗಳ ಬಹುದೊಡ್ಡ ಕಂತೆ
ಬಿಡಿಸಿದಶ್ಟೂ ಎಳೆಗಳು ,
ಬಗೆದಶ್ಟೂ ಆಳ ;
ಮೊಗೆದಶ್ಟೂ ಕಣ್ಣೀರು..!!
ನಡೆದಶ್ಟೂ ದೊರದ ಹೆದ್ದಾರಿ
ನೋಡಿದಶ್ಟೂ ಬಗೆಬಗೆಯ ಬಿಂಬ
ಯೋಚಿಸಿದಶ್ಟೂ ವಿವಿದ ಕೋನಗಳು !

ಕಡೆಗೂ ಕಾಣದ ಸುಂದರ ಚಿತ್ರಗಳು
ಆದರೊ ಕಯ್ಬಿಡದ
ಕಲ್ಪನೆಗಳ ಬಾವಗಳು..!
ಮತ್ತೆ ನಾಳೆಯನು
ಎದುರಿಸಲು ಬೇಕು
ನೆನ್ನೆಯ ಸುಂದರ
ನೆನಪುಗಳು..!!

(ತಿಟ್ಟದ ಸೆಲೆ: ಬರಹಗಾರರ ಆಯ್ಕೆ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications