ನೋಡಲೆಂದು ನಿಂತೆ ರವಿಯ…

ಪ್ರವೀಣ್ ಕ್ರುಶ್ಣ

Sunset_with_coconut_palm_tree,_Fiji

ನೋಡಲೆಂದು ನಿಂತೆ ರವಿಯ
ಮೋಡದ ಮರೆಯಲ್ಲಿದ್ದರೂ,
ಬಿಡಲಿಲ್ಲ ಹಟವ ಅವ ಮರೆಯಾಗುವ
ಸಮಯವಾದರೂ,
ಮರೆಯಾಗಲು ಬೆಳಕು ಬೆಳಗಲು ಶುರು ಮಾಡಿತು
ಅಲ್ಲಿದ್ದ ದೀಪವು
ಕೊನೆಗೂ ನೋಡಲಾಗಲಿಲ್ಲ
ತೋರದೆ ಕನಿಕರ ಮೋಡಗಳಿವು
ರವಿ ಮರಳಿ ಬರುವೆನು ನಾಳೆ
ಕೇಳಬೇಡ ಕಾದಿರಲು ಸಾಕ್ಶಿ ಏನೆಂದು
ಈ ಒಂಟಿ ಮರ ಒಂಟಿ ದೀಪವಿದೆ ಬಂದು ಕೇಳು
ಕಾದಿರುವುದು ನಿಜವೇ ಎಂದು

(ಚಿತ್ರ: commons.wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: