ಮಕ್ಕಳಿರಲವ್ವ ಮನೆ ತುಂಬ!

ಸಿದ್ದೇಗವ್ಡ

beautiful-indian-baby-photos-001

1.
ನಿನ್ನ ಮಲಗಿಸುವಾಗ
ತುಂಬಾ ಸುಸ್ತಾಗಿಬಿಡುತ್ತದೆ
ನೀನದೆಶ್ಟು
ಹಟಮಾರಿ, ತುಂಟ?
ನಿದ್ರಿಸಿದಾಗ ನೋಡಬೇಕು
ಆ ನಿನ್ನ ಮೊಗ
ಅದೆಶ್ಟು ಪ್ರಶಾಂತ.

2.
ಏನೋ ಬೇಸರ
ನಿನ್ನ ನೋಡದಿದ್ದಾಗ
ಕಣ್ಣು
ಬಿಟ್ಟಕೂಡಲೇ
ನೇಸರ.

3.
ನೀ
ಮಾಡು ಏನಾದರೂ
ಹೊಡೆಯುವ
ಅನಿವಾರ್‍ಯತೆಯೊಂದನ್ನು ಮಾತ್ರ
ತಾರದಿರು
ನೆನೆದು ನಿದ್ರೆಯಿಲ್ಲದೆ
ನಾನು
ಸುರಿಸಲೆಶ್ಟು ಕಣ್ಣೀರು?

(ಚಿತ್ರ: babieswallpaper44.blogspot.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.