ಕುಡ್ಲದ ವಿಶೇಶ: ಬಿಸಿ ಬಿಸಿ ಮಂಗಳೂರು ಬನ್!

ಆಶಾ ರಯ್.

Mangalore bun

ಬೇಕಾಗುವ ಪದಾರ್‍ತಗಳು

1.5 ಬಟ್ಟಲು ಗೋದಿ ಹಿಟ್ಟು ಇಲ್ಲವೇ ಮಯ್ದಾ ಹಿಟ್ಟು
1 ಮಾಗಿದ ದೊಡ್ಡ ಬಾಳೆಹಣ್ಣು
2-3 ಚಮಚ ಮೊಸರು
2-3 ಚಮಚ ಸಕ್ಕರೆ
1/4 ಚಮಚ ಅಡಿಗೆ ಸೋಡಾ
1/2 ಚಮಚ ಜೀರಿಗೆ
1/2 ಚಮಚ ಉಪ್ಪು
ಕರಿಯಲು ಎಣ್ಣೆ

ಮಾಡುವ ಬಗೆ

ಬಾಳೆಹಣ್ಣನ್ನು ಚೆನ್ನಾಗಿ ನುರಿಸಿಕೊಳ್ಳಿ, ಅದಕ್ಕೆ ಉಪ್ಪು, ಸಕ್ಕರೆ, ಸೋಡಾ, ಜೀರಿಗೆ ಮತ್ತು ಮೊಸರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ (ಬೇಕಾದಲ್ಲಿ ಮಿಕ್ಸರಿನಲ್ಲಿ ರುಬ್ಬಿಕೊಳ್ಳಬಹುದು). ಗೋದಿ ಹಿಟ್ಟು ಇಲ್ಲವೇ ಮಯ್ದಾ ಹಿಟ್ಟಿಗೆ ಬಾಳೆಹಣ್ಣಿನ ಮಿಶ್ರಣ ಸೇರಿಸಿ ಚೆನ್ನಾಗಿ ನಾದಿರಿ. ಈ ಕಲಸಿದ ಹಿಟ್ಟನ್ನು 3-4 ಗಂಟೆ ವರೆಗೆ ಮುಚ್ಚಿ ಇಡಿ ಆಮೇಲೆ ಸಣ್ಣ ಗಾತ್ರದ, 1/4 ಅಂಗುಲ ದಪ್ಪದ ಪೂರಿಗಳನ್ನು ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಟೊಮೇಟೊ ಕೆಚಪ್ ಅತವಾ ಚಟ್ನಿಯೊಂದಿಗೆ ಕುಡ್ಲದ ವಿಶೇಶ ಬಿಸಿ ಬಿಸಿ ಮಂಗಳೂರು ಬನ್ ಸವಿಯಿರಿ.

(ಚಿತ್ರ ಸೆಲೆ: cookinginmylab.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. KP Bolumbu says:

    ಏನೇ ಆಗಲಿ, ಆದಷ್ಟು ಮೈದಾ ಬಳಸದಿರಿ. ಅದು ಆರೋಗ್ಯಕ್ಕೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ.

ಅನಿಸಿಕೆ ಬರೆಯಿರಿ: