ನನ್ನ ಕಣ್ಣಿನ ದೀಪ

ವಿಬಾ ರಮೇಶ್

ರವಿಯೇ,
ನಿನ್ನೆಡೆ ವಾಲುವ ಹೂವು ನಾನು

ಶಶಿಯೇ,
ನಿನ್ನ ಸೆಳೆತಕ್ಕೆ ಉಕ್ಕೇರುವ ಸಾಗರ ನಾನು

ಮಾಂತ್ರಿಕನೆ,
ನಾ ಮಣ್ಣಿನ ಮುದ್ದೆ ನೀ ಕೊಡುವ ಆಕ್ರುತಿ ನಾನು

ಮುರಳಿಯೇ ,
ನಿನ್ನ ನಾದಕ್ಕೆ ವಶಳಾದ ರಾದೆ ನಾನು

ನಿನ್ನ ದನಿ ಜೇನ ಹನಿ
ನಿನ್ನ ಸ್ಪರ್‍ಶ ನನ್ನ ಹರ್‍ಶ
ನೀ – ನನ್ನ ಕಣ್ಣಿನ ದೀಪ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: