ಗೋದಿ ಹಿಟ್ಟಿನ ಬೇಸಿನ್ ಲಾಡು

ಕಲ್ಪನಾ ಹೆಗಡೆ.

inchu p 8645

ಬೇಸಿನ್ ಲಾಡು ಅಂದರೆ ಬಾಯಲ್ಲಿ ನೀರು ಬರತ್ತೆ. ಬೇಸಿನ್ ಲಾಡುವನ್ನು ನಾನಾ ತರಹದ ಹಿಟ್ಟಿನಿಂದ ತಯಾರಿಸುತ್ತಾರೆ. ಇದು ಗೋದಿ ಹಿಟ್ಟಿನಿಂದ ತಯಾರಿಸುವ ಬೇಸಿನ್ ಲಾಡು. ಇದು ಎಲ್ಲರ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗೋದಿ ಹಿಟ್ಟಿನ ಬೇಸಿನ್ ಲಾಡು ಮಾಡುವುದು ಸುಲಬ ಹಾಗೇ ತಿನ್ನುವುದಕ್ಕೆ ಬಲು ರುಚಿ. ತಿಳಿದುಕೊಳ್ಳುವ ಆಸಕ್ತಿ ಇದೆಯಾ? ಹಾಗಿದ್ದರೆ ಇಲ್ಲಿದೆ ತಮ್ಮ ಮುಂದೆ.

ಬೇಕಾಗುವ ಸಾಮಗ್ರಿಗಳು

ಅರ್‍ದ ಕೆ.ಜಿ. ಗೋದಿಹಿಟ್ಟು, ಅರ್‍ದ ಕೆ.ಜಿ. ಸಕ್ಕರೆ, 200 ಗ್ರಾಂ ತುಪ್ಪ.

ಮಾಡುವ ಬಗೆ

ಬಾಣಲೆಯಲ್ಲಿ ಗೋದಿಹಿಟ್ಟು, ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಆನಂತರ ಸಕ್ಕರೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಹುರಿದ ಗೋದಿಹಿಟ್ಟಿಗೆ ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಕಯ್ಯಲ್ಲಿ ಉಂಡೆಯನ್ನು ಕಟ್ಟಿಕೊಳ್ಳಿ. ತಯಾರಿಸಿದ ಬೇಸಿನ್ ಲಾಡುವನ್ನು ತಟ್ಟೆಗೆ ಹಾಕಿ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಇದು ಗೋದಿ ಹಿಟ್ಟಿನ ಲಾಡು! ಗೋದಿ ಹಿಟ್ಟಿನ ಬೇಸಿನ್ ಲಾಡು ಅಲ್ಲ! ಸರೋಜಾ ಮೇಟಿಕುರ್ಕೆ

  2. ನಿಮ್ಮ ಅನಿಸಿಕೆಗೆ ಧನ್ಯವಾದ. ನಾವು ಹೇಳೋದು ಗೋದಿ ಹಿಟ್ಟಿನ ಬೇಸಿನ್ ಲಾಡು ಅಂತ ನೀವು ಹಾಗೆ ಹೇಳಬಹುದು ತೊಂದರೆ ಇಲ್ಲ. ಅಡಿಗೆ ತಿಂಡಿಗಳ ವಿಶಯದಲ್ಲಿ ಒಂದೊಂದು ಊರವರು ಒಂದೊಂದುತರ ಕರೀತಾರೆ…. !! ಕಲ್ಪನಾ ಹೆಗಡೆ. !!

ಅನಿಸಿಕೆ ಬರೆಯಿರಿ: