ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದು?
– ರಗುನಂದನ್.
ಹಿಂದಿನ ಬರಹದಲ್ಲಿ ಪಿಪಾ(FIFA) ಹೊರಹಾಕಿರುವ ವಿಶ್ವಕಪ್ ಡ್ರಾ ಗಳನ್ನು ನೋಡಿದೆವು. ಈಗ ಒಂದೊಂದು ಗುಂಪಿನೊಳಗೆ ಯಾವ ಬಗೆಯ ಪಯ್ಪೋಟಿ ಏರ್‍ಪಡಬಹುದು ಎಂಬುದನ್ನು ನೋಡೋಣ. ಕಾಲ್ಚೆಂಡು ತಿಳಿವಿಗರು(Football Pundits) ಸಾಮಾನ್ಯವಾಗಿ ಯಾವುದೇ ದೊಡ್ಡ ಮಟ್ಟದ ಕಾಲ್ಚೆಂಡು ಕೂಟದ ಡ್ರಾಗಳು ಹೊರಬಿದ್ದಮೇಲೆ ಆ ಗುಂಪುಗಳಲ್ಲಿ ಹೆಚ್ಚು ತೊಡಕಾಗಿರುವ ಗುಂಪನ್ನು ಗುರುತಿಸುತ್ತಾರೆ. ಅದಕ್ಕೆ ಅವರು ಗ್ರೂಪ್ ಆಪ್ ಡೆತ್ (group of death) ಎಂದು ಹೆಸರಿಸುತ್ತಾರೆ. ಅಂದರೆ ಈ ಗುಂಪಿನಲ್ಲಿ ಹೆಚ್ಚು ಬಲವಾದ ತಂಡಗಳು ಆಡುತ್ತವೆ ಮತ್ತು ಎಶ್ಟೇ ಬಲಶಾಲಿಯಾಗಿದ್ದರೂ ಆ ತಂಡಗಳಿಗೆ ಮುಂದಿನ ಹಂತಕ್ಕೆ ಹೋಗುವುದೇ ಒಂದು ತೊಡಕಾಗಿ ಮಾರ್‍ಪಡಬಹುದು. ಕನ್ನಡದಲ್ಲಿ ಇದಕ್ಕೆ ತೊಡಕಾದ ಗುಂಪು ಎಂದು ಹೆಸರಿಸೋಣ. ಈ ಸಲಿಯ ವಿಶ್ವಕಪ್ಪಿನಲ್ಲಿ ತೊಡಕಾದ ಗುಂಪು ಯಾವುದು ಮತ್ತು ಅದನ್ನು ಹೇಗೆ ಗುರುತಿಸುತ್ತಾರೆ ಎಂದು ನೋಡೋಣ.
ಮೊದಲಿಗೆ FIFA ಒಕ್ಕೂಟವು ಕೊಟ್ಟಿರುವ ಸ್ತಾನ(Ranking) ಗಳು ಮತ್ತು ಗಳಿಸಿರುವ ಅಂಕಗಳನ್ನು ನೋಡೋಣ. ಕ್ರಿಕೆಟ್ಟಿನಲ್ಲಿ ಹೇಗೆ ತಂಡಗಳಿಗೆ ಸ್ತಾನ ಮತ್ತು ಅಂಕಗಳು ಕೊಡಲಾಗುತ್ತೋ ಅದೇ ಬಗೆಯಲ್ಲಿ ಕಾಲ್ಚೆಂಡಿನಲ್ಲಿಯೂ ತಂಡಗಳಿಗೆ ಸ್ತಾನಗಳನ್ನು ಕೊಡಲಾಗುತ್ತೆ. ಇದು ಆ ತಂಡಗಳ ಇದುವರೆಗಿನ ಸಾದನೆಯ ಮೇಲೆ ಕೊಡಲಾಗಿದೆ.
A ಗುಂಪು |
ಸ್ತಾನ/ಅಂಕ |
B ಗುಂಪು |
ಸ್ತಾನ/ಅಂಕ |
C ಗುಂಪು |
ಸ್ತಾನ/ಅಂಕ |
D ಗುಂಪು |
ಸ್ತಾನ/ಅಂಕ |
ಬ್ರೆಜಿಲ್ | 10/1102 | ಸ್ಪೇನ್ | 1/1507 | ಕೊಲಂಬಿಯಾ | 4/1200 | ಉರುಗ್ವೆ | 6/1132 |
ಕ್ರೊವೇಶಿಯಾ | 16/971 | ಹಾಲೆಂಡ್ | 9/1106 | ಗ್ರೀಸ್ | 12/1055 | ಕೋಸ್ಟಾ ರಿಕಾ | 31/738 |
ಮೆಕ್ಸಿಕೊ | 20/892 | ಚಿಲಿ | 15/1014 | ಅಯ್.ಕೋಸ್ಟ್ | 17/918 | ಇಂಗ್ಲೆಂಡ್ | 13/1041 |
ಕ್ಯಾಮರೂನ್ | 51/612 | ಆಸ್ಟ್ರೇಲಿಯಾ | 59/564 | ಜಪಾನ್ | 48/638 | ಇಟಲಿ | 7/1120 |
ಒಟ್ಟು | 97/3577 | ಒಟ್ಟು | 84/4191 | ಒಟ್ಟು | 81/3811 | ಒಟ್ಟು | 57/4031 |
E ಗುಂಪು | ಸ್ತಾನ/ಅಂಕ | F ಗುಂಪು | ಸ್ತಾನ/ಅಂಕ | G ಗುಂಪು | ಸ್ತಾನ/ಅಂಕ | H ಗುಂಪು | ಸ್ತಾನ/ಅಂಕ |
ಸ್ವಿಟ್ಜರ್‍ಲ್ಯಾಂಡ್ | 8/1113 | ಅರ್‍ಜೆಂಟೀನ | 3/1251 | ಜರ್‍ಮನಿ | 2/1318 | ಬೆಲ್ಜಿಯಮ್ | 11/1098 |
ಇಕ್ವೆಡಾರ್ | 23/852 | ಹೆರ್‍ಜಿಗೋವಿನ | 21/886 | ಪೋರ್‍ಚುಗಲ್ | 5/1172 | ಆಲ್ಜೀರಿಯಾ | 26/800 |
ಪ್ರಾನ್ಸ್ | 19/893 | ಇರಾನ್ | 45/650 | ಗಾನಾ | 24/849 | ರಶ್ಯಾ | 22/870 |
ಹೊಂಡುರಾಸ್ | 41/688 | ನಯ್ಜೀರಿಯಾ | 36/710 | ಯು.ಎಸ್.ಎ | 14/1019 | ಕೊರಿಯಾ | 54/577 |
ಒಟ್ಟು | 91/3546 | ಒಟ್ಟು | 105/3497 | ಒಟ್ಟು | 45/4358 | ಒಟ್ಟು | 113/3345 |
ಮೇಲಿನ ಎಂಟು ಗುಂಪುಗಳ ಪಟ್ಟಿಯನ್ನು ನೋಡಿದರೆ ಮೊದಲಿಗೆ ಕಾಣುವುದು G ಗುಂಪು. ಕಡು ಹೆಚ್ಚು ಅಂಕಗಳನ್ನು ಹೊಂದಿರುವ ಈ ಗುಂಪಿನಲ್ಲಿ ಜರ್‍ಮನಿ ಮತ್ತು ಪೋರ್‍ಚುಗಲ್ ಮುಂದಿನ ಹಂತಕ್ಕೆ ಹೋಗಬಹುದು. ಆದರೆ ಯು.ಎಸ್.ಎ ಅದನ್ನು ತಡೆದೀತೇ ಎಂಬುದನ್ನು ಕಾದುನೋಡಬೇಕು.
ಬಳಿಕ ಕಾಣುವುದು B ಗುಂಪು. ಇಲ್ಲಿ ಮೂರು ಬಲಶಾಲಿ ತಂಡಗಳಿವೆ. ಸ್ಪೇನ್-ಹಾಲೆಂಡ್ ಸೆಣಸಾಟ ಕಳೆದ ವಿಶ್ವಕಪ್ಪಿನ ಕಡೆಯಾಟ(Final) ಮತ್ತೆ ಮರುಕಳಿಸಲಿದೆ. ಚಿಲಿ ಕೂಡ ಒಳ್ಳೆ ತಂಡವೇ ಆಗಿದೆ. D ಗುಂಪಿನಲ್ಲಿ ಇರುವ ಬಲಶಾಲಿ ತಂಡಗಳು ಉರುಗ್ವೆ, ಇಂಗ್ಲೆಂಡ್ ಮತ್ತು ಇಟಲಿ. ಇಂಗ್ಲೆಂಡ್ ತಂಡಕ್ಕೆ ಜಗತ್ತಿನಲ್ಲಿ ಹೆಚ್ಚು ಅಬಿಮಾನಿಗಳಿದ್ದು ಈ ಗುಂಪನ್ನು ನೋಡಿದ ಬಳಿಕ ಇಂಗ್ಲೆಂಡ್ ಮುಂದೆ ಹೋಗಬಲ್ಲುದೆ ಎಂಬ ದೊಡ್ಡ ಪ್ರಶ್ನೆ ಕಾಡಿದೆ.
ಮುಂದಿನ ಬರಹದಲ್ಲಿ ಒಂದೊಂದು ಎಲ್ಲಾ ಗುಂಪುಗಳ ತೆರಹುಗಳ(chances) ಬಗ್ಗೆ ಒಂದು ಕಣ್ಣಾಡಿಸೋಣ.
(ಚಿತ್ರಸೆಲೆ: brazilfifaworldcup2014.com)
1 Response
[…] ಬರಹದಲ್ಲಿ ನಾವು ಈ ವಿಶ್ವಕಪ್ಪಿನ ತೊಡಕಿನ ಗುಂಪು […]