ಎದೆ ತುಂಬಿ ಬಂದಿದೆ – ಜಿ.ಎಸ್. ಶಿವರುದ್ರಪ್ಪನವರಿಗೆ ’ಹೊನಲು’ ತಂಡದ ನುಡಿನಮನ

– ಬರತ್ ಕುಮಾರ್.

7_2_GS-Shivarudrappa1

ಎದೆ ತುಂಬಿ ಬಂದಿದೆ
ಹಾಡಲಾರೆ ನಾನು
ಕಾಣದ ಕಡಲಿಗೆ
ಪಯಣಿಸಿದೆ ನೀನು

ಪ್ರೀತಿ ಇಲ್ಲದ ಮೇಲೆ
ದೀಪವಿರದ ದಾರಿಯಲಿ
ಎಲ್ಲೋ ಹುಡುಕಿದೆ
ಇಲ್ಲದ ದೇವರ

ಏನೋ ಏಕೋ ನನ್ನೆದೆ
ವೀಣೆ ಮಿಡಿಯುತ ನರಳಿದೆ
ನೀನು ಮುಗಿಲು, ನಾನು ನೆಲ.
ನಿನ್ನ ಒಲವೆ ನನ್ನ ಬಲ.

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಕನ್ನಡದ ಕಬ್ಬ ಕಂಡ
ಕಣ್ಣುಗಳು ಕಣ್ಣು ಮುಚ್ಚಿತಿಲ್ಲಿ

ಎಡ-ಬಲ, ಹಳತು-ಹೊಸತುಗಳ
ಎಲ್ಲೆಗಳ ತಾಕದೆ, ಎಲ್ಲವನು ಅರಗಿಸಿ
ಎಲ್ಲರನು ಕೂಡಿಸಿ, ನಡುದಾರಿಯ ಬೆಸೆಯಿಸಿ
ಎಲ್ಲಿ ಹೋದೆ ನೀನು, ನಲ್ಸಾಲಲಿ ನೀನೇ ನೀನು

(ಚಿತ್ರ: kanaja.in )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *