ಕಣ್ಣೀರು

 ಹರ‍್ಶಿತ್ ಮಂಜುನಾತ್.

crying-eyes

ನನ್ನ ಮನದೊಳಗೇನೋ ಒಂದು ಅರಿಕೆ
ಅದನ್ನೇ ಬರೆಯಬೇಕೆನ್ನೋ ಬಯಕೆ
ತುಟಿಯಂಚಿನ ವರೆಗೆ ಬಂದರೂ ಪದ ಪುಂಜ ಸೇರಲು ನನ್ನ ಕುಂಚ ಬಿಡದೇಕೆ ?

ಕನ್ನಡಿಯ ಮೇಲೂ ನಿನ್ನ ಬಿಂಬವೇ ಮೂಡಿದೆ
ಅದ ಕಂಡು ಕಣ್ಣಂಚಿನಲ್ಲಿ ಹನಿ ನೀರು ಜಿನುಗಿದೆ
ಅರೆಕ್ಶಣದ ಮುದವೆನ್ನ ಮನದ ಪರದೆ ಸರಿಸಿದೆ
ಆದರೂ ಕಣ್ಣಂಚಿನಲ್ಲಿ ಹನಿ ನೀರು ಜಿನುಗಿದೆ

ಪದ ಪದ ಸೇರಿಸಿ ಮನದರಿಕೆಯನ್ನೇನೋ ಬರೆದೆ
ಹರಿದ ಕಣ್ಣೀರು ಬರೆದ ಪದಗಳನೇ ಅಳಿಸಿದೆ
ಮರುಸ್ರುಶ್ಟಿಗೆನ್ನ ಪದಬಂಡಾರವನ್ನೇ ಸುರಿಸಿದೆ
ಆದರೂ ಕಣ್ಣೀರು ಪದಗಳಲೇ ಉಳಿದಿದೆ

(ಚಿತ್ರ: blogs.unimelb.edu.au )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: