ಗೊಂದಲ

ದೇವೇಂದ್ರ ಅಬ್ಬಿಗೇರಿ

27_haruhi_jigsaw_03

ಈ ಜಗ ವಯ್ರುದ್ಯಗಳ ಆಗರ, ಜಟಿಲತೆಯ ಸಾಗರ
ಯಾವುದು ನಿಜ? ಯಾವುದು ಸುಳ್ಳು?
ಪ್ರಮಾಣಿಸಿ ನೋಡಿದಶ್ಟು ಹಿಗ್ಗುತ್ತಿರುವ ಗೊಂದಲ
ಒಂದು ಸಂದೇಹದಿಂದ ನೂರು ಸಂದೇಹಗಳ ಜನನ
ಬೆಳೆಯುತಲೆ ಇರುವ ಅನುಮಾನದ ಹನುಮನ ಬಾಲ

ಎಲ್ಲರ ಕತೆಗೆ ಒಂದೇ ಆದಿ- ಹುಟ್ಟು
ಪಾತ್ರಗಳು ಎಶ್ಟೆಲ್ಲ ಒದ್ದಾಡಿದರು ಕತೆಯ ಕೊನೆ ಒಂದೆ- ಸಾವು
ಇದು ಪೂರ್‍ವ ನಿರ್‍ದರಿತ ಕತೆಯೆ ಆದರೂ ಯಾಕೆ ಜಗದಲಿ ಇಶ್ಟೊಂದು ದ್ವೇಶದ ದಳ್ಳುರಿ?
ದರ್‍ಮ ಜಾತಿಯ ಹೆಸರಲಿ ಮಾರಾಮಾರಿ?
ಬಾಳಲಾರೆವೆ ನಾವು ಹಂಚಿಕೊಂಡು ಒಲವು?

ವಿಜ್ನಾನ ಹುಟ್ಟಿದ್ದು ಮಾನವನ ಏಳ್ಗೆಗಂತೆ, ಜೀವನ ಸರಳಗೊಳಿಸಲಂತೆ,
ನೋಡಿ ಏನಾಗಿದೆ ಇಂದು
ನಾವೊ ತಂತ್ರಜ್ನಾನದ ಆಳು
ನಡೆಯುತಿದೆ ಯಾಂತ್ರಿಕ ಬಾಳು
ಶಕ್ತಿ ಪ್ರದರ್‍ಶನಕ್ಕೆ ನಡೆದಿದೆ ಪಯ್ಪೋಟಿ
ಕಿತ್ತು ತಿನ್ನುವ ಬಡತನವಿದ್ದರೂ ಅಣುಬಾಂಬಿಗೆ ಸುರಿಯುತ್ತಿದ್ದೇವೆ ಕೋಟಿ-ಕೋಟಿ
ಗೊತ್ತಿದೆ, ವಿಜ್ನಾನವೆ ಅಲ್ಲ ಎಲ್ಲದಕು ಪರಿಹಾರ
ಆದರೂ ಯಾಕೆ ಆದುನಿಕ ಸವಲತ್ತುಗಳ ಮೇಲೆ ನಮ್ಮ ಮೋಹ?
ಬದುಕಲಾರವೆ ಇದ್ದುದರಲ್ಲೆ ಹಾಯಾಗಿ, ತೋರಿಕೆಯಿಂದ ಸರಿದು ದೂರ

ಉತ್ತರ ಹುಡುಕಿದಶ್ಟು ಪ್ರಶ್ನೆಗಳ ಉದ್ಬವ, ದೀಪದ ಕೆಳಗಡೆಯೆ ಕತ್ತಲು!
ಎಂದಿಗು ಬಿಡಿಸಲಾರದ ಒಗಟು ನಮ್ಮ ಈ ವ್ಯವಸ್ತೆ
ಡಿಗ್ರಿ-ಅಂತಸ್ತು-ಸ್ಡತ್ತು, ಇವೆ ಇಲ್ಲಿ ನಮ್ಮಯ ಗುರುತು!
ಸಣ್ಣವರಿದ್ದಾಗ ಆದಾಯಕ್ಕಾಗಿಯೇ ಓದು
ಬೆಳದಾಗಲೇ ಗೊತ್ತಾಗುವುದು, ಕಲಿತದನ್ನು ಮರೆಯಲೇಬೇಕೆಂದು
ನಮ್ಮನ್ನು ನಾವು ಅರಿಯಲು,ಪ್ರೀತಿಯಿಂದ ಬಾಳಲು

(ಚಿತ್ರ: www.horebinternational.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: