ಇಸ್ರೋ ಚಳಕಕ್ಕೆ ಮಣಿದ ತುಂಟ ಪೋರ GSLV-D5

 – ಪ್ರಶಾಂತ ಸೊರಟೂರ.

ಎಡೆಬಿಡದ ನಾಲ್ಕು ಸೋಲುಗಳನ್ನು ಮೀರಿ GSLV-D5 ಏರುಬಂಡಿ ಮೂಲಕ GSAT-14 ಒಡನಾಟದ ಸುತ್ತುಗವನ್ನು (communication satellite) ಬಾನಿಗೇರಿಸುವಲ್ಲಿ ಇಸ್ರೋ ಗೆಲುವು ಕಂಡಿದೆ.

GSLV-D5-erike

ನಿನ್ನೆ ಬಯ್ಗು (ಸಂಜೆ) ಹೊತ್ತು, 4.18 ಕ್ಕೆ ಆಂದ್ರಪ್ರದೇಶದ ಶ್ರ‍ೀಹರಿಕೋಟಾದಿಂದ ಬಾನಿಗೇರಿದ GSLV-D5, ತನಗೆ ಹಾಕಿಕೊಟ್ಟ ಕೆಲಸವನ್ನು ಚಾಚುತಪ್ಪದೇ ಮಾಡಿ ಮುಗಿಸಿದೆ. ಹಾಸನದಲ್ಲಿರುವ ಇಸ್ರೋ ಅಂಕೆನೆಲೆಯು (control center) GSAT-14 ಸುತ್ತುಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ನೆಲದ ತಿರುಗುದಾರಿಯಲ್ಲಿ ಸುತ್ತುಗವನ್ನು ಅಣಿಗೊಳಿಸಿದೆ.

ಇದರೊಂದಿಗೆ ಸುಮಾರು ಇಪ್ಪತ್ತು ವರುಶಗಳ ಅರಕೆಯಿಂದ ಹೊರಹೊಮ್ಮಿದ ಕಡುತಂಪು ಬಿಣಿಗೆ (Cryogenic engine) ಬಳಸಿಕೊಂಡು ಏರುಬಂಡಿಯನ್ನು ಹಾರಿಸುವ ಚಳಕವನ್ನು ಕಯ್ಗೂಡಿಸಿಕೊಂಡು, ನಾಸಾದಂತಹ ಜಗತ್ತಿನ ಮುಂಚೂಣಿ ಬಾನರಿಮೆ ಕೂಟಗಳ ಸಾಲಿಗೆ ನಮ್ಮ ಇಸ್ರೋ ಕೂಡ ಸೇರಿದಂತಾಗಿದೆ.

ಮಂಗಳಯಾನದಂತಹ ದೊಡ್ಡ ಹಮ್ಮುಗೆ ನೀಡಿದ ಸವಾಲುಗಳನ್ನು ಮೀರಿಸುವಂತೆ GSLV ಹಮ್ಮುಗೆ ಇಸ್ರೋ ಕೂಟವನ್ನು ಕಾಡಿಸಿತ್ತು. ಇದಕ್ಕಾಗಿಯೇ GSLV-D5 ಹಾರಿಸಿದ ಬಳಿಕ ಇಸ್ರೋ ತನ್ನ ಪೇಸಬುಕ್ ಪುಟದಲ್ಲಿ ’ಗೆದ್ದ ತುಂಟ ಹುಡುಗ’ ಅಂತಾ ಬರೆದುಕೊಂಡಿತು 🙂

GSLV-D5 ಹಾರಿಸುವ ಮುನ್ನ ನಿನ್ನೆ ಬೆಳೆಗ್ಗೆ ’ಹೊನಲು’ ಈ ಹಮ್ಮುಗೆಯ ಕುರಿತು ಬೆಳಕುಚೆಲ್ಲಿತ್ತು.

(ತಿಟ್ಟಸೆಲೆ: ಇಸ್ರೋ ಪೇಸಬುಕ್ ಪುಟ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: