ಮೋಡ ತೇಲಿ ಬಂದಯ್ತಿ ಒಂದು

ವಿನಾಯಕ ಕವಾಸಿ

single_cloud_by_evelivesey-d2yko5i

ಮೋಡ ತೇಲಿ ಬಂದಯ್ತಿ ಒಂದು
ಸಣ್ಣಗ, ಹಗೂರಗ, ಮೆಲ್ಲಗ..
ಕಯ್ ಒಡ್ಡಿದರ ಸಿಗುತಿಲ್ಲ, ಬರಿ ಗಾಳಿನ ಅದು..
ಬರಸೆಳೆದು ಅಪ್ಪಿ ಮುದ್ದಿಸಲಿ ಹ್ಯಾಂಗ
ಬರಿ ಬೆಚ್ಚನೆಯ ಮಾಯೆ ಅದು…

ಸರಿದು ಮಗ್ಗಲಕ ಹೊಂಟದ ನೋಡ
ತಡೆ ಹಿಡಿದು ಕಟ್ಟಿ ಹಾಕಲಿ ಹ್ಯಾಂಗ
ಮನದಾಳದ ಮಾತ ಅದರಲಿ ಗೀಚಲಿ ಹ್ಯಾಂಗ
ಒಲವಿನ ಗುಟ್ಟ ತಿಳಿಸಲಿ ಹ್ಯಾಂಗ

ಕರಗದೆ, ಸುರಿಯದೆ, ಅರಿಯದೆ
ನನ್ನ ಒಡಲ ನೋವಿಗೆ ಮರುಗದೆ
ಮುಂದ ಮುಂದಕ ಹೊಂಟದ ನಿಲ್ಲದನ
ಗಾಳಿ ತೂರಿದ ಕಡಿ ಓಡತದ
ಬೆಟ್ಟ ಮುತ್ತಿಟ್ಟರ ಸುರಿತದ,

ನಾನೇನು ಬೆಟ್ಟ ಏನು?
ಬೀಸೋ ಗಾಳಿ ಏನು?
ತಿಳಿದು ಸುಮ್ಮನಿರೊ ಮನಸೆ,
ನೀ ಕುಣಿಬ್ಯಾಡ ಹುಚ್ಚು ಕೋಡಂಗಿ ಹಂಗ…

(ಚಿತ್ರ: evelivesey.deviantart.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: