ಮತ್ತೆ ಬಂತು ಶಶ್ಟಿ

ರಾಜು ಎಲ್.ಎಸ್.

ಮತ್ತೆ ಬಂತು ಶಶ್ಟಿ
ಮತ್ತೆ ಬರಬೇಕಲ್ಲವೇ ನಾವೇ ಮಾಡಿಕೊಂಡ ಶಶ್ಟಿ

ನಿತ್ಯ ಮುಂಜಾನೆ ನೋಡದ ಮನುಜರು ಶಶ್ಟಿಯಂದು ಏಳುವರು
ಸೂರ‍್ಯನ ಸೊಬಗನು ನೋಡಲುಮತ್ತೆ ಬಂತು ಶಶ್ಟಿ
ಮತ್ತೆ ಬರಬೇಕಲ್ಲವೇ ನಾವೇ ಮಾಡಿಕೊಂಡ ಶಶ್ಟಿ

ನಿತ್ಯ ಮುಂಜಾನೆ ನೋಡದ ಮನುಜರು ಶಶ್ಟಿಯಂದು ಏಳುವರು
ಸೂರ‍್ಯನ ಸೊಬಗನು ನೋಡಲು
ಅವರಿಗೇನು ಗೊತ್ತುಗೊತ್ತಿಲ್ಲವೋ ನಿತ್ಯ ಸೂರ‍್ಯನ ಸೊಬಗು
ಇರುವುದೇ ಹೀಗೆ

ಮಡಿ ಉಟ್ಟು ಹೊರಟರು ಹುತ್ತದ ಕಡೆ ತನಿಯೆರೆಯಲು
ನಿತ್ಯ ಕಾಣದ ಹುತ್ತದ ಹಸಿವು ಕಾಣುವುದು ಶಶ್ಟಿಯಂದು

ಶುರುವಾಗುವುದು (ಅ)ಬುದ್ದಿಗಳ ಮವ್ಡ್ಯವೆಂಬ ಚರ‍್ಚೆ
ಹಾವು ಇರದ ಹುತ್ತಕ್ಕೆ ಹಾಲು ಏತಕೆ ಎಂಬ ಚರ‍್ಚೆ

ಹುತ್ತ ನೋಡುತ ಎಂತು ಪುಟ್ಟ ಕಂದ
ಹಾವು ಇರದಿದ್ದರೆ ಏನಮ್ಮ ಇರುವ ಇರುವೆಗೆ ಬೇಡವೇ ಹಾಲು

ನೆರಳು ಹುಡುಕಿ ಬರುವ ಹಾವನ್ನು ಬಡಿದರು ಅನ್ಯದಿನದಂದು
ಅದೇ ಹಾವನ್ನು ಹುಡುಕುತ ಹುತ್ತಕ್ಕೆ ಬರುವರು ಶಶ್ಟಿಯಂದು

ಹುತ್ತ ನೋಡಿ ನಕ್ಕಿತು ನಾನು ಇರುವತನಕ ಈ ಶಶ್ಟಿ ಎನಗೆ
ನಾ ಬಿದ್ದರೆ ಮತ್ತೆ ತಿರುಗಲಾರರು ಶಶ್ಟಿಯಂದು

ಮತ್ತೆ ಬಂತು ಶಶ್ಟಿ…..ಮತ್ತೆ ಬಂತು ಶಶ್ಟಿ…..

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: