ನೀ ಚೆನ್ನುಡಿ ಕನ್ನಡ

– ಕಿರಣ್ ಮಲೆನಾಡು.

chennudi

 

ನೀ ಚೆನ್ನುಡಿ – ಈ ನಿನ್ನ ಬಣ್ಣಿಸದಸಳ ಚೆಲುವು, ಒಲವು

ನೀ ಹೆನ್ನುಡಿ – ಈ ನಿನ್ನ ಮುಪ್ಪಿರದ ಹಿರಿತನ

ನೀ ನಲ್ನುಡಿ – ಈ ನಿನ್ನ ನವಿರಾದ ಗೆಳೆತನ, ಸಿಹಿತನ

ನೀ ತಾಯ್ನುಡಿ – ಈ ನಿನ್ನ ಕನ್ನಡಿಗರ ತಾಯ್ತನ

ನೀ ನಾಡನುಡಿ – ಈ ನಿನ್ನ ಕರುನಾಡು, ಸಿರಿ ಗಂದದಬೀಡು

ನೀ ಸವಿನುಡಿ – ಈ ನಿನ್ನ ಸಿಹಿಯಾದ ಪದಗಳು ಸವಿ

ನೀ ನಡೆನುಡಿ – ಈ ನಿನ್ನ ಕನ್ನಡಿಗರನ್ನ ನಡೆಸುವ ಪರಿ

ನೀ ಮೇಲ್ನುಡಿ – ಈ ನಿನ್ನ ಎಲ್ಲೆ ಮೀರಿದ ನಲ್ಮೆ

ನೀ ಒನ್ನುಡಿ – ಈ ನಿನ್ನ ಒಗಟಿರದ ಒಗ್ಗಟ್ಟು

ನೀ ಮುನ್ನುಡಿ – ಈ ನಿನ್ನ ಕನ್ನಡಿಗರೆದೆಯ ಮುನ್ನುಡಿ

ನೀ ನನ್ನುಡಿ – ಈ ನಿನ್ನಯ ನಾವುಗಳು

ನೀ ನಾಣ್ಣುಡಿ – ಈ ನಿನ್ನ ಸವಿಗಾದೆಯ ಸಿರಿಯ ಪರಿ

ನೀ ಹೊನ್ನುಡಿ – ಹೊನ್ನಲ್ಲೂ ಸಿಗದ ಈ ನಿನ್ನ  ಪದಗಳು

ನೀ ಮಿನ್ನುಡಿ – ಈ ನಿನ್ನ ಮಿಂಚಿನ ಮಾಹಿತಿಯ ಬೆರಗು

ನೀ ಸಿರಿನುಡಿ – ಈ ನಿನ್ನ ಪದಸಿರಿಯ ಸಿರಿವಂತಿಕೆ

ನೀ ಕನ್ನಡನುಡಿ – ನೀ ಕನ್ನಡನುಡಿ – ನೀ ಕನ್ನಡನುಡಿ !

 

(ಚಿತ್ರ ಸೆಲೆ:  ಕಿರಣ್ ಮಲೆನಾಡು)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: