ಅವಳು …
ಬಿಚ್ಚುಮಲ್ಲಿಗೆ ಮೊಗದವಳೆ, ಬಾಗಿಲ ಬಳಿ ನಿಂತವಳೆ
ಲಜ್ಜೆಯಿಂದ ಕದವ ಕೆರೆವ ಮುದ್ದು ಬೆರಳೆ,
ನೀ ಹಚ್ಚಿದ ಪ್ರೇಮದ ಹಣೆತೆಯಿನ್ನೂ ಉರಿಯುತಿದೆ
ಬೆಚ್ಚಗಿನ ಹ್ರುದಯ ಮಂದಿರದಲ್ಲಿ
ಮಬ್ಬುಗತ್ತಲಲ್ಲಿ ಕೈ ಹಿಡಿದು, ಅತ್ತಿಂದಿತ್ತ ತಿರುಗಾಡಿ
ಜೂಟಾಟವಾಡಿ, ಸೋತು ಗೆದ್ದೆಯಲ್ಲೇ,
ಕಿವಿಯಲ್ಲಿ ಪಿಸುಗುಟ್ಟಿ, ನಕ್ಕು ನುಡಿದ ಮಾತೆಲ್ಲವೂ ನೆನಪಾಗಿದೆ
ಹಿಂದೆ ನಿಂತು ಕೈ ಬೀಸಿ ಕಳಿಸಿಕೊಡು ವಯ್ಯಾರಿ
ನೀನಿರದೆ ಕಾಲಿಯೆನಿಸುವ ಮನವ,
ನಿನ್ನ ಚೆನ್ನುಡಿಯಿಂದ ತುಂಬುವೆ
ತುಟಿಗಚ್ಚಿ, ಮತ್ತೆ ಮತ್ತೆ ಹಿಂದಿರುಗಿ ಮಿಕ್ಕ ಜೀವನ ಸವೆಸುವೆ
( ಚಿತ್ರ ಸೆಲೆ: gyaban.deviantart.com )
Beautiful!