ನಿನ್ನದೇ ಜೀವನ…

– ಮಂಜುನಾತ್ ಪಾಟೀಲ್.

nimma-daari

1. ನಿನ್ನದೇ ಜೀವನ

ನೀ ನಿನ್ನವನಾಗಿಯೇ ಇರು ದೊರೆ
ಬೇಡ ಬೇರೆಯವರ ಅನುಕರಣೆ
ಸುಗಮವಾಗೇನು ಇರದು ನಿನ್ನ ದಾರಿ
ಗಮ್ಯ ಮರೆತು, ಸುಕಿಸು ಪಯಣ ಮರಿ

ಬೇಕಿಲ್ಲ ಪರರ ಅನುಮೋದನೆ
ಅರಿಯರು ನೀ ಪಡುವ ವೇದನೆ
ಇರುವುದು ಒಂದೇ ಒಂದು ಜೀವನ
ಮರೆಯದೆ ಜೀವಿಸು ನಿನ್ನದೇ ಜೀವನ

2. ಸುಲಬವಲ್ಲ ಆದರೆ ಜೀವನ ತುಂಬಾ ಸರಳ

ಚೆನ್ನಾಗಿದೀನಿ ಎಂಬುದು ಮೋಸ ನಮಗೆ
ಸತ್ಯ ತಳ ಸೇರುವುದು ಒಳ ಒಳಗೆ
ಜಗವೆಲ್ಲ ತೋರದು ನಿನ್ನ ಸಣ್ಣ ಕಿಡಕಿ
ಆಗಲಿ ನಿಜದೊಂದಿಗೆ ಮುಕಾ ಮುಕಿ

ಸುಲಬವಲ್ಲ ಆದರೆ ಜೀವನ ತುಂಬಾ ಸರಳ
ಏನು ಬೇಕು? ಆಯ್ಕೆ ಮಾಡಿಕೊಳ್ಳುವುದೇ ವಿರಳ
ಕಣ್ಣ ನೇರಕ್ಕಿರಲು ಮುಟ್ಟಬೇಕಿರುವ ಗುರಿ
ಒಂದುಗೂಡಿಸಲು ಎಲ್ಲ ಬಲ, ಸರಳ ಸಾಗುವ ದಾರಿ

ಎದ್ದ ಕ್ಶಣದಿಂದ ಶುರು ಮನ ದೇಹಗಳ ಹೋರಾಟ
ದೇಹ ಬಯಸುವುದು ದಿನವೂ ಆಡುವ ಆಟ
ಕೊಡಿ ಮನಕ್ಕೆ ಹೆಚ್ಚಿನ ಬಲ, ದೇಹವಾಗಲಿ ಚಕಿತ
ಬರಳು ನಿಮ್ಮ ಜಗದ ಆಚೆ, ವಿಜಯಲಕ್ಶ್ಮಿ ಕಚಿತ

(ಚಿತ್ರ ಸೆಲೆ : presentman.ru )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: