ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ – 2015

ಬಾಬು ಅಜಯ್.

ಚಿತ್ರದಲ್ಲಿ ರೊನ್ನಿ ಓ ಸುಲ್ಲಿವಾನ್(Ronnie ‘O Sullivan)

ಚಿತ್ರದಲ್ಲಿ ರೊನ್ನಿ ಓ ಸುಲ್ಲಿವಾನ್(Ronnie ‘O Sullivan)

2015ರ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ನಾಳೆಯಿಂದ (ಏಪ್ರಿಲ್ 18) ಶುರುವಾಗಲಿದ್ದು ಮೇ 4 ರವರೆಗೆ ನಡೆಯಲಿದೆ. ಪ್ರತಿ ವರುಶದಂತೆ ಈ ಬಾರಿಯೂ ಇಂಗ್ಲೆಂಡ್‍ನ ಶೇಪಿಲ್ಡ್ ನಲ್ಲಿರುವ (Sheffield, England) ಕ್ರೂಸಿಬಲ್ ತಿಯೇಟರ್‍ನಲ್ಲಿ ನಡೆಸಲಾಗುತ್ತೆ. ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಮೊದಲ ಬಾರಿಗೆ ನಡೆದದ್ದು 1927 ರಲ್ಲಿ. ಈ ಬಾರಿ ನಡೆಯುತ್ತಿರುವುದು 78 ನೇ ಚಾಂಪಿಯನ್ಶಿಪ್ ಆಗಿದ್ದು, ಬೆಟ್ ಪ್ರೆಡ್(Betfred) ಈ ಬಾರಿ ಅದಿಕ್ರುತವಾಗಿ ವೆಚ್ಚತೆರಲಿದ್ದಾರೆ(Sponsor).

ಈ ಬಾರಿಯ ಬಹುಮಾನದ ಹಣ £ 1,364,000 (ಒಂದು ಮಿಲಿಯನ್ ಮುನ್ನೂರ ಅರವತ್ತ ನಾಲ್ಕು ಸಾವಿರ ಪೌಂಡ್ ಗಳು). ಗೆದ್ದವರಿಗೆ 300,000 ಪೌಂಡ್‍ಗಳು ಮತ್ತು ಎರಡನೇ ಸ್ತಾನ ಪಡೆದವರಿಗೆ 125,000 ಪೌಂಡ್‍ಗಳು ದೊರೆಯಲಿವೆ. ಕೇವಲ 32 ಆಟಗಾರರು ಸೆಣಸಾಡುವ ಈ ಆಟದಲ್ಲಿ, ಮೊದಲ 16 ರ‍್ಯಾಂಕ್ ಗಳಿಸಿರುವ ಆಟಗಾರರು ಯಾವುದೇ ಅರ‍್ಹತೆಯ ಪಂದ್ಯಗಳಿಲ್ಲದೆ ತಂತಾನೆ (Automatic) ಆಯ್ಕೆಯಾಗಲಿದ್ದು, ಉಳಿದ 16 ಆಟಗಾರರ ಸ್ತಾನಕ್ಕೆ ಅರ‍್ಹತಾ ಪಂದ್ಯಗಳು ನಡೆಯಲಿವೆ. ಒಬ್ಬ ಆಟಗಾರ ವಿಶ್ವ ಸ್ನೂಕರ್ ಚಾಂಪಿಯನ್ ಆಗಲು 5 ಪಂದ್ಯಗಳನ್ನು ಗೆಲ್ಲಬೇಕಾಗಿದ್ದು, ಪ್ರತಿ ಪಂದ್ಯವು ನಾಕ್ ಔಟ್ (knock out) ಮಾದರಿಯಲ್ಲಿ ನಡೆಯುತ್ತದೆ. ಮೊದಲ ಎರಡು ಸುತ್ತಿನ ಪಂದ್ಯಗಳು ಒಂದು ಅತವ ಎರಡು ದಿನ ನಡೆದರೆ, ಒಬ್ಬ ಆಟಗಾರ ಹೆಚ್ಚು ಪ್ರೇಮ್ (frame) ಗೆಲ್ಲುವುದರ ಮೇಲೆ ಕ್ವಾರ‍್ಟರ್ ಪೈನಲ್, ಸೆಮಿಪೈನಲ್ ಮತ್ತು ಪೈನಲ್ ಪಂದ್ಯಗಳು 2 ಅತವ 3 ದಿನಗಳು ನಡೆಯುತ್ತವೆ.

ಅತಿ ಹೆಚ್ಚು ಬಾರಿ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಗೆದ್ದಿರುವ ಹೆಗ್ಗಳಿಕೆಯ ಸ್ಟೀಪನ್ ಹೆಂಡ್ರಿ (Stephen Hendry) ಮೊದಲ ಸ್ತಾನದಲ್ಲಿದ್ದು, ಏಳು ಬಾರಿ ಗೆದ್ದಿದ್ದಾರೆ. ಸ್ಟೀವ್ ಡೇವಿಸ್ (Steve Davis) ಮತ್ತು ರೇ ರೀರ‍್ಡಾನ್ (Ray Reardon) ಅವರು 6 ಬಾರಿ ಗೆದ್ದು ಎರಡನೇ ಸ್ತಾನದಲ್ಲಿದ್ದಾರೆ. 5 ಬಾರಿ ಗೆದ್ದಿರುವ ರೊನ್ನಿ ಓ ಸುಲ್ಲಿವಾನ್(Ronnie ‘O Sullivan) ಅವರು 3 ನೇ ಸ್ತಾನದಲ್ಲಿದ್ದಾರೆ. ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಮಾರ‍್ಕ್ ಸೇಲ್ಬಿ(Mark Selby) ಮತ್ತು ರನ್ನರ್ ಅಪ್ ರೊನ್ನಿ ಓ ಸುಲ್ಲಿವಾನ್ ಮೇಲೆ ಎಲ್ಲರ ಕಣ್ಣಿದ್ದು, ಬಹಳ ಬಿರುಸಿನಾಟಕ್ಕೆ ಹೆಸರುವಾಸಿಯಾದ ರೊನ್ನಿ ಈ ಬಾರಿ ತಮ್ಮ 6 ನೇ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಗೆಲ್ಲುತ್ತಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

(ಚಿತ್ರ ಸೆಲೆ: bbc.co.uk)
(ಮಾಹಿತಿ ಸೆಲೆ: ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications