ಬಸ್ಸಿನ ಗೋಳು
ಎಲ್ಲಿ ದಂಗೆ ಚಳುವಳಿ ನೆಡೆದರೂ
ಕಲ್ಲು ಎತ್ತಿ ಬೀಸಿ
ಮುಕಮೂತಿ ಒಂದು ನೋಡದೆ
ಮಾಡುವರೆನ್ನನು ಗಾಸಿ
ಕಿಟಕಿ ಒಡೆದು ಪುಡಿಪುಡಿ ಮಾಡುವರು
ಹರಡಿ ಗಾಜಿನ ರಾಶಿ
ಸುಕಾ ಸುಮ್ಮನೆ ಹಿಂಸೆ ಮಾಡುವರ್
ಹುಚ್ಚು ಮನುಜರು ರೋಸಿ
ಮಕ್ಕಳು ಮರಿಗಳು ಸರಕನ್ನೆಲ್ಲ
ದಿನವೂ ಹೊತ್ತು ಸಾಗ್ಸಿ
ಸೇವೆ ಮಾಡಿದ ನನಗೆ ಕೊಡುವರು
ಇಂತಾ ಶಿಕ್ಶೆ ಪಾಸು
ಮೀರಿದ ಬಾರಕೂ ಜಗ್ಗದೆ ಓಡುವೆ
ಕಶ್ಟವನ್ನೆಲ್ಲ ಸಹಿಸಿ
ಉಪಕ್ರುತಿ ನೋಡದೆ ಬೆಂಕಿ ಇಡುವರು
ನಡುಬೀದಿಯಲಿ ನಿಲ್ಸಿ
ನೂರ‍್ಕಾಲಕ್ಕು ನೆನಪಲ್ಲಿಡಿರಿ
ಮನದಲ್ಲಿದನು ಜಪಿಸಿ
ಉಪಕಾರವನು ಸ್ಮರಿಸುವುದಲ್ಲವೆ
ಮಾನವ ಪ್ರೀತಿಗೆ ಸಾಕ್ಶಿ
(ಚಿತ್ರ ಸೆಲೆ: k2.pl )
ಇತ್ತೀಚಿನ ಅನಿಸಿಕೆಗಳು