ಹೇ ಮಾದವ ತಿರುಗಿ ನೋಡೊಮ್ಮೆ…

– ಎಡೆಯೂರು ಪಲ್ಲವಿ.

lonelyheart

ಹ್ರುದಯವನ್ನೇ ಬರೆದಿರುವೆ
ನಿನ್ನ ನಾಮಕಮಲಗಳಿಗೆ
ನೀ ಸಿಕ್ಕದಿರನೆಂಬ ನೋವಿನ ಬಾವನೆಯೇ
ಸಿಹಿಯಾಗಿದೆ ಈ ಜನ್ಮಕ್ಕೆ ಸಾಲುವಶ್ಟು

ನಾ ಪೂಜಿಸುವ ವ್ಯಕ್ತಿತ್ವ ನಾ ಆರಾದಿಸುವ ಪುರುಶ
ನೀನಲ್ಲದೆ ಮತ್ತೊಬ್ಬನಿಲ್ಲ
ನೆನೆದಶ್ಟು ಸಿಹಿ ನಿನ್ನ ನೆನಪು
ಬರೆದಶ್ಟು ಮುಗಿಯದ ಬಾವದ ಒನಪು

ಇರುಳೂ ಸಾಲದಾಗಿದೆ ನಿನ್ನ ಕನಸಿನಲ್ಲಿ ತುಂಬಿಕೊಳ್ಳಲು
ನನ್ನೊಲವಿನ ನಿನ್ನ ಮಿಡಿತದ ಬಾವನೆಗಳ
ಹೆಕ್ಕಿ ಬರೆಯಲು ಪುಸ್ತಕವು ಸಾಲದೇನೋ
ನೋಡಿದಶ್ಟೂ ಸಾಲದು ನಿನ್ನ ನೋಟ

ಕಂಗಳು ಸಾಲದಾದವು ಸಿಹಿ ನಗುವಿನ ಅಲೆ ತುಂಬಿಕೊಳ್ಳಲು
ನನ್ನೀ ಅಗಾದ ಬಾವನೆಗಳಿಗೆ ಒಡೆಯನು ನೀ
ಹೇ ಮಾದವ ತಿರುಗಿ ನೋಡೊಮ್ಮೆ
ಕಾತರದಿ ಕಾದಿರುವಳು ಅಬಿಸಾರಿಕೆ

( ಚಿತ್ರ ಸೆಲೆ: foolishquestions.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: