ಗುರಿಯ ಮರೆಸಿತು

ಬಾಸ್ಕರ್ ಡಿ.ಬಿ.

ಕೂಡಿ ಇಟ್ಟ ಕನಸುಗಳ
ಬೆನ್ನೇರಿ ಹೊರಟಾಗ
ಗುರಿಯ ಮರೆಸಿತು ಯೌವನವು ಆಗ

ಆನಂದದಿ ಕ್ಶಣವ ಕಳೆವಾಗ
ಅನಿಸಿತಾಗ ಜೀವನ ಸುಂದರ
ಗುರಿಯ ಮರೆಸಿತು ಯೌವನವು ಆಗ

ಜಂಗಮವಾಣಿ ಜೊತೆಗೂಡಿದಾಗ
ಸೌಕ್ಯವೆನಿಸಿತಾಗ ಸಮಯ
ಗುರಿಯ ಮರೆಸಿತು ಯೌವನವು ಆಗ

ಒಲವಿನ ಪತ್ರಿಕೆ ಓದುವಾಗ
ಪದವಿಯ ಪುಸ್ತಕ ಸರಿದಾಗ
ಗುರಿಯ ಮರೆಸಿತು ಯೌವನವು ಆಗ

ಪ್ರಿಯತಮೆ ನನ್ನ ಮರೆತು
ಬದುಕು ಬೀದಿಗೆ ಬಂದಾಗ
ಬಡಿದೆಬ್ಬಿಸಿತು ಗುರಿಯು ಆಗ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Lohitkumar says:

    ultimate brother

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *