ಕರಾವಳಿಯ ಅಡುಗೆ ನೀರ್‍ದೋಸೆಯನ್ನು ಮಾಡುವ ಬಗೆ

– ಕಲ್ಪನಾ ಹೆಗಡೆ.

ಬೇಕಾಗುವ ಪದಾರ‍್ತಗಳು:
1. 2 ಪಾವು ಅಕ್ಕಿ
2. ಅರ‍್ದ ಹೋಳು ಕಾಯಿ
3. ಉಪ್ಪು
4. ನೀರು
5. ಎಣ್ಣೆ

ಮಾಡುವ ಬಗೆ:

ರಾತ್ರಿ 2 ಪಾವು ಅಕ್ಕಿಯನ್ನು ನೀರಿನಲ್ಲಿ ನೆನೆಹಾಕಿಕೊಳ್ಳಿ. ಮಾರನೆ ದಿನ ಬೆಳಗ್ಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದಕ್ಕೆ ಅರ‍್ದ ಹೋಳು ಕಾಯಿ ತುರಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಆನಂತರ ರುಚಿಗೆ ತಕ್ಕಶ್ಟು ಉಪ್ಪು, ನೀರು ಹಾಕಿ ತೆಳ್ಳಗೆ ಕಲಸಿಕೊಳ್ಳಿ. ಬಳಿಕ, ಚೆನ್ನಾಗಿ ಕಾದ ಕಾವಲಿ ಮೇಲೆ ಎಣ್ಣೆ ಸವರಿ ಸೌಟಿನಿಂದ ಎರಚಿ. ಅದಕ್ಕೆ ಮೇಲಿಂದ ಕಾಲು ಚಮಚ ಎಣ್ಣೆಯನ್ನು ಹಾಕಿ. ದೋಸೆ ಬೆಂದ ಬಳಿಕ, ಸೌಟಿನಿಂದ ದೋಸೆಯನ್ನು ಮಗುಚಿ ಹಾಕಿ ಕೊಂಚ ಬೇಯಿಸಿ ತೆಗೆದರೆ ಆಯಿತು, ಬಿಸಿ ಬಿಸಿ ನೀರ್‍ದೋಸೆ ತಿನ್ನಲು ಅಣಿಯಾದಂತೆ. ನೀವು ಮಾಡಿದ ದೋಸೆಯನ್ನು ಕಾಯಿಚಟ್ನಿಯೊಂದಿಗೆ ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: