ಮಜ್ಜಿಗೆ ಹುಳಿ

– ಕಿಶೋರ್ ಕುಮಾರ್.

ಏನೇನು ಬೇಕು

  • ಮೊಸರು – ¼ ಲೀಟರ್
  • ತೆಂಗಿನಕಾಯಿ ತುರಿ – ಸ್ವಲ್ಪ
  • ಅಕ್ಕಿ ಹಿಟ್ಟು – 1 ಚಿಕ್ಕ ಚಮಚ
  • ಜೀರಿಗೆ – 1 ಚಿಕ್ಕ ಚಮಚ
  • ಕರಿಬೇವು – ಸ್ವಲ್ಪ
  • ಸಾಸಿವೆ – ಸ್ವಲ್ಪ
  • ಬೆಳ್ಳುಳ್ಳಿ – 4 ಎಸಳು
  • ಹಸಿಮೆಣಸಿನಕಾಯಿ – 2
  • ಈರುಳ್ಳಿ – 1
  • ಅರಿಶಿಣ ಪುಡಿ – ½ ಚಮಚ
  • ಅಡುಗೆ ಎಣ್ಣೆ – 2 ಚಮಚ
  • ಸಾರಿನ ಪುಡಿ (ಸಾಂಬಾರ್ ಪುಡಿ) – 1 ಚಮಚ

ಮಾಡುವ ಬಗೆ

ಮೊಸರನ್ನು ಕಡೆದು ಮಜ್ಜಿಗೆ ಮಾಡಿಕೊಳ್ಳಬೇಕು. ಸಣ್ಣ ಜಾರ್ ಗೆ ತೆಂಗಿನಕಾಯಿ ತುರಿ, ಅಕ್ಕಿ ಹಿಟ್ಟು, ಜೀರಿಗೆ, ಅರಿಶಿಣ ಪುಡಿ, ಕರಿಬೇವು ಹಾಕಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ಸಾಸಿವೆ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಹಾಕಿ. ಇದಕ್ಕೆ ರುಬ್ಬಿಕೊಂಡಿರುವ ಮಿಶ್ರಣ ಹಾಗೂ ಮಜ್ಜಿಗೆಯನ್ನು ಸೇರಿಸಿ ಕುದಿಸಿ. ನಂತರ ಸಾರಿನ ಪುಡಿ ಹಾಗೂ ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕುದಿಸಿ. ಈಗ ಮಜ್ಜಿಗೆ ಹುಳಿ ರೆಡಿ. ಇದನ್ನು ಅನ್ನದ ಜೊತೆ ಸವಿಯಲು ಚೆನ್ನ. ಈ ರೀತಿಯ ಮಜ್ಜಿಗೆ ಹುಳಿಯನ್ನು ಚಾಮರಾಜನಗರ ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಕಡೆ ಮಾಡಲಾಗುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks