ನಿನ್ನ ನೀ ಅರಿಯೇ…

– ಪೂರ‍್ಣಿಮಾ ಎಮ್ ಪಿರಾಜಿ.

ಅರಿಯೇ… ಅರಿಯೇ… ಅರಿಯೇ…
ನಿನ್ನ ನೀ ಅರಿಯೇ…
ನೀನಿರುವ ಲೋಕವನ್ನರಿಯೇ
ನೀ ನಡೆವಾ ದಾರಿಯನ್ನರಿಯೇ
ಅರಿತು ಕಾಣು ಸುಕದ ಬಾಳು

ಮೀನು ತಾನಿರುವ ತಾಣವನ್ನರಿಯದೇ
ಹುಡುಕಿದಂತೆ ಸುಂದರ ಕಡಲನ್ನು
ಕಾಣದ ಕಡಲಿಗೆ ಹಂಬಲಿಸಿದಂತೆ ಮೀನು
ಸುಕವ ಹುಡುಕಲು ಹಂಬಲಿಸುತಿರುವೆ ನೀನು

ಕಣ್ಣಿಗೆ ಕಂಡರೂ ಕೈಗೆ ಸಿಗದ ಪಾದರಸ
ಸುಕದ ಬೇಟೆಗೆ ಮರೆಯಾಗುತಿದೆ ಜೀವನದ ರಸ
ಕೈಗೆ ಸಿಕ್ಕ ಸುಕವು ಇಲ್ಲ ಶಾಶ್ವತ
ಅಂತರಂಗ ಶುದ್ದಿಯೊಂದೇ ಸ್ವಹಿತ… ಪರಹಿತ…

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: