ಮನೆಗೆ ಬೇಕು ಹಿರಿ ಜೀವ

– ಸುರಬಿ ಲತಾ.

ವಯಸ್ಸಾದಂತೆ ಮಕ್ಕಳು ತಮ್ಮ ಹಿರಿಯರನ್ನು ವ್ರದ್ದಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಕೆಲಸಕ್ಕೆ ಹೋಗುವ ದಂಪತಿಗಳಾದರೆ ಬೆಳಿಗ್ಗೆ ಹೋಗಿ, ಸಾಯಂಕಾಲ ಮನೆಗೆ ಬರುತ್ತಾರೆ.

ಅವರ ಮಕ್ಕಳು ಮನೆಗೆ ಬಂದು ತಾವೇ ಮನೇಲಿ ಏನಾದರೂ ಇದ್ದರೆ ತಿಂದು ಮತ್ತೆ ಮನೆಪಾಟಕ್ಕೆ ಹೋಗಿಬಿಡುತ್ತಾರೆ. ಒಂದು ತರದಲ್ಲಿ ಯಂತ್ರದಂತೆ. ರಾತ್ರಿ ಬಂದು ಮತ್ತೆ ಓದು ನಂತರ ಮಲಗು.

ಒಂದೊಂದು ಸಾರಿ ವಯಸ್ಸಿನ ಗಂಡು/ಹೆಣ್ಣು ಮಕ್ಕಳು ತಾಯಿ ತಂದೆ ಇಲ್ಲದ ಸಮಯದಲ್ಲಿ ಏನು ಮಾಡುತ್ತಾರೆ ಯಾವಾಗ ತಪ್ಪು ದಾರಿ ಹಿಡಿದಿರುತ್ತಾರೆ ಎಂದು ಅವರ ಹೆತ್ತವರಿಗೆ ತಿಳಿಯುವುದೇ ಇಲ್ಲ. ಸಮಯ ಮೀರಿದಾಗ ನೊಂದುಕೊಳ್ಳುತ್ತಾರೆ.

ಮನೆಗೆ ದೊಡ್ಡವರು ಅಂತ ಇದ್ದರೆ ಚಿಕ್ಕ ವಯಸ್ಸಿನಲ್ಲಿ ನೀತಿ ಕತೆ ಹೇಳುವುದು ಹಾಗೂ ವಯಸ್ಸಿಗೆ ಬಂದ ಮಕ್ಕಳಿಗೆ ಬುದ್ದಿವಾದ ಹೇಳುವುದು ಮಾಡುತ್ತಾರೆ. ಮಕ್ಕಳಿಗೂ ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ತಪ್ಪು ದಾರಿ ಹಿಡಿಯಲು ಹಿಂಜರಿಯುತ್ತಾರೆ .

ಒಂಟಿತನ ಮಕ್ಕಳನ್ನು ಎಂದೂ ಕಾಡದಂತೆ ಅವರು ಕಾಪಾಡುತ್ತಾರೆ. ತಂದೆ ತಾಯಿ ಎಶ್ಟು ಪ್ರೀತಿ ಕೊಟ್ಟರೂ ಅಜ್ಜ ಅಜ್ಜಿಯ ಪ್ರೀತಿಯೇ ಬಲು ಮದುರ.

ತಂದೆ ತಾಯಿ ಮಕ್ಕಳು ತಪ್ಪು ಮಾಡಿದಾಗ ಕಿರುಚುತ್ತಾರೆ, ಬಯ್ಯುತ್ತಾರೆ, ಒಂದೊಂದು ಸಾರಿ ಶಿಕ್ಶಿಸುತ್ತಾರೆ. ಆದರೂ ಮಕ್ಕಳು ಸರಿ ದಾರಿಗೆ ಬಂದೇ ಬರುತ್ತಾರೆ ಎಂಬ ನಂಬಿಕೆ ಇಲ್ಲ. ಆದರೆ ಮನೆಯ ಹಿರಿಯರು ಇದು ಯಾವುದನ್ನು ಮಾಡದೆ ಅವರ ಅನುಬವ ತಾಳ್ಮೆ ಯಿಂದ ಮಕ್ಕಳನ್ನು ಮನ ಮುಟ್ಟುವ ಮಾತಿನಿಂದಲೇ ಸರಿ ದಾರಿಗೆ ತಂದ ಉದಾಹರಣೆಗಳು ಬೇಕಾದಶ್ಟು ಸಿಗುತ್ತವೆ.

ಅಶ್ಟೇ ಅಲ್ಲದೆ ಅಕ್ಕ ಪಕ್ಕದ ಮನೆಗಳಲ್ಲಿ ಆಗಲಿ, ಹೊರ ಹೋದಾಗಲೇ ಆಗಲಿ ಹಿರಿಯರ ಜೊತೆ ಮಕ್ಕಳು ಹೋದಾಗ ಯಾರೂ ಹೊರಗಿನವರು ಚೇಡಿಸುವ ದೈರ‍್ಯ ಮಾಡುವುದಿಲ್ಲ.

ಹಿರಿಯರಿದ್ದರೆ ಮನೆಯಲ್ಲಿ ಅದರ ಕಳೆಯೇ ಬೇರೆ. ಹಬ್ಬ ಹರಿದಿನ ಅವರು ನಮಗೆ ತಮ್ಮ ಹಿಂದಿನ ನೆನಪುಗಳನ್ನು ಹೇಳುತ್ತಾ, ನಮಗೂ ಹಬ್ಬದ ರೀತಿ ನೀತಿ ಹೇಳಿ ಕೊಡುತ್ತಾರೆ. ನಮ್ಮಂತೆ ನಮ್ಮ ಮಕ್ಕಳು ಅದೇ ರೀತಿ ಪಾಲಿಸುತ್ತಾರೆ.

ಒಟ್ಟಿನಲ್ಲಿ ಹಿರಿಯರು ಮನೆಯಲ್ಲಿ ನಮ್ಮ ಜೊತೆಯಲ್ಲಿ ಇರಬೇಕು ಆಗಲೇ ಮನೆಯ ರೀತಿ ನೀತಿ ಬಯ ಬಕ್ತಿ ಎಲ್ಲವೂ ಇರುತ್ತದೆ. ಆದ್ದರಿಂದ ದಯವಿಟ್ಟು ಹಿರಿಯರನ್ನು ಹೊರೆ ಎಂದು ಬಾವಿಸಬೇಡಿ. ಅವರಿದ್ದರೇನೆ ನಮ್ಮ ಜೀವನಕ್ಕೂ ಸಾರ‍್ತಕತೆ ಸಿಗುವುದು.

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: