ತಿಂಗಳ ಬರಹಗಳು July 2017

ತುಂತುರು ಕತೆಗಳು

– ಪ್ರಿಯದರ‍್ಶಿನಿ ಶೆಟ್ಟರ್. ಓದುಗ ಆತ ಕತೆಯೊಂದನ್ನು ಓದುತ್ತಿದ್ದ. ಕತೆ ಬರೆದ ಲೇಕಕರನ್ನು ಹೊಗಳುತ್ತಲೇ ಓದನ್ನು ಮುಂದುವರೆಸಿದ. ಆ ಕತೆ ‘ತನ್ನ ಜೀವನಕ್ಕೆ ಬಹಳ ಹತ್ತಿರ’ ಎಂದುಕೊಂಡ. ಕಾರಣ, ಕತೆಯೊಳಗಿನ ಪಾತ್ರ ಇವನನ್ನೇ ಹೋಲುತ್ತಿತ್ತು. ಕತೆಯ ದ್ರುಶ್ಯಗಳು ಈತನ ಬದುಕಿನ ಸಂದರ‍್ಬಗಳಾಗಿದ್ದವು. ಕತೆ ಮುಗಿಯುತ್ತ...

ಮ್ಯೂನಿಕ್ ನ ಸುತ್ತ ಒಂದು ಸುತ್ತು(ಕಂತು-2)

– ಜಯತೀರ‍್ತ ನಾಡಗವ್ಡ. ಮ್ಯೂನಿಕ್ ಕುರಿತ ಹಿಂದಿನ ಬರಹದಲ್ಲಿ ಕೆಲವು ಜಾಗಗಳ ಬಗ್ಗೆ ತಿಳಿಸಲಾಗಿತ್ತು. ಮ್ಯೂನಿಕ್‍ನಲ್ಲಿ ನೋಡತಕ್ಕ ಇನ್ನೂ  ಹಲವು ಜಾಗಗಳಿವೆ. ಅವುಗಳ ಕುರಿತು ಹೇಳದೇ ಹೋದರೆ ಮ್ಯೂನಿಕ್ ಸುತ್ತಾಟ ಪೂರ‍್ತಿಯೆನಿಸಲಿಕ್ಕಿಲ್ಲ. ಬಿ.ಎಮ್‍.ಡಬ್ಲ್ಯೂ ಒಡವೆಮನೆ ಮತ್ತು ವೆಲ್ಟ್ (BMW Museum and Welt): ಒಲಿಂಪಿಯಾ ಪಾರ‍್ಕಿನಿಂದ...

ನಗೆಬರಹ: ಕೂದಲಾಯಣ

– ಪ್ರಶಾಂತ ಎಲೆಮನೆ. ಏನೇ ಹೇಳಿ, ತಲೆಮೇಲೆ ಕೂದಲಿದ್ದರೇನೆ ಚೆಂದ.ಕೂದಲಿಲ್ಲ ಅಂದರೆ ಸ್ವಲ್ಪ ಜಾಸ್ತಿನೇ ವಯಸ್ಸಾದಂತೆ ಕಾಣುತ್ತೆ. ನಮ್ಮ ಚಿತ್ರ ತಾರೆಯರನ್ನೆ ನೋಡಿ, ಅವರು ಬೇರೆ ಬೇರೆ ಹೇರ್ ಸ್ಟೈಲ್ ನಲ್ಲಿ ಬಂದಾಗಲೇ ನಮಗೆ ಚೆಂದ ಅನಿಸೋದು. ಹಾಗಂತ ಇದು ಇಂದು, ನಿನ್ನೆದಲ್ಲ. 900...

ಹಟವಾದಿ ಕುರುವೀರ…

– ಕೌಸಲ್ಯ. ಮಣ್ಣಾಸೆಯೊಳ್ ಪಗೆಯಿಲ್ ಮುನ್ನುಡಿಯಿಟ್ಟನ್ ಸುಯೋದನ ಶತಕುರುವಂಶವನ್ ರಣರಂಗದ ಜೂಜಿನೊಳಾಟಕೆ ಒತ್ತೆಯಾಗಿರಿಸಿ ಗೆಲ್ವೆ ಗೆಲ್ವೆನೆಂಬ ಅಹಂಕಾರಮದಗಳ ಸಾನಿದ್ಯದಲಿ ಚಲವನ್ನಿತ್ತ ಹಗೆಯಲಿ ಬಗೆದನ್ ದ್ವೇಶಮತ್ಸರಂಗಳಂ ಬಾತ್ರುಂಗಳಿಂಗೆ ಬೋಜನದಿ ಅರ‍್ಪಿಸಿದನ್ ಅನುದಿನಂ ನಿತ್ಯಸೇವನೆಯ ಪಲವು ಪಾಂಡವಕುಲದ ವಿನಾಶಕೆ ಪೇಳ್ದನ್ ಕುರುವೀರ ಚಲವಾದಿ ಕುರುವೀರ ಸಮರದೊಳ್ ಆಹ್ವಾನಿಸಿದ ಸಮವೀರನಂ...

ಕರಾವಳಿಯ ಅಡುಗೆ ನೀರ್‍ದೋಸೆಯನ್ನು ಮಾಡುವ ಬಗೆ

– ಕಲ್ಪನಾ ಹೆಗಡೆ. ಬೇಕಾಗುವ ಪದಾರ‍್ತಗಳು: 1. 2 ಪಾವು ಅಕ್ಕಿ 2. ಅರ‍್ದ ಹೋಳು ಕಾಯಿ 3. ಉಪ್ಪು 4. ನೀರು 5. ಎಣ್ಣೆ ಮಾಡುವ ಬಗೆ: ರಾತ್ರಿ 2 ಪಾವು ಅಕ್ಕಿಯನ್ನು ನೀರಿನಲ್ಲಿ ನೆನೆಹಾಕಿಕೊಳ್ಳಿ. ಮಾರನೆ ದಿನ ಬೆಳಗ್ಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು...

ಶರೀಪನ ಚರಿತೆಯನು ಹಾಡ್ಯಾವು

– ಚಂದ್ರಗೌಡ ಕುಲಕರ‍್ಣಿ. ಬಯಲ ಬಸವನ ನಂಬಿ ಜಯದ ಹಾಡನು ಕಟ್ಟಿ ಸ್ವಯದ ಅನುಬಾವ ಹಂಚಿದ | ಶರೀಪನ ದಯದಿಂದ ಕಾವ್ಯ ಕಟ್ಟಿರುವೆ | ಶರೀಪ ಶಿವಯೋಗಿಯ ಚರಿತೆಯ ಮಜಕೂರ ಅರಿವಿನ ಸೆಲೆಯ ತೇಜದಲಿ | ಮೂಡುತ್ತ ಹರಿದು ಬಂದಿಹುದು ತ್ರಿಪದಿಯಲಿ | ಅಂದದ ಲಯದಲ್ಲಿ...

ಅಕ್ಕಮಹಾದೇವಿಯ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.   ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ. ಮಾನವ ಜೀವಿಯ ಮಯ್ ಮನಗಳಲ್ಲಿ ಮೂಡುವ ಕೆಟ್ಟ ಬಯಕೆ ಮತ್ತು ಚಟಗಳು ಅವನ ಇಡೀ ಬದುಕನ್ನೇ ಬಲಿತೆಗೆದುಕೊಳ್ಳುತ್ತವೆ ಎಂಬುದನ್ನು ತಿಳಿಸುತ್ತಾ, ವ್ಯಕ್ತಿಯು ತನ್ನ...

ಬಾನಲ್ಲಿ ಕುಣಿಯುವ ಬಣ್ಣದ ಬಲೆಗಳು!

– ಕೆ.ವಿ.ಶಶಿದರ. ಲಂಡನ್, ಪೋನಿಕ್ಸ್ ನಂತಹ ದೊಡ್ಡ ನಗರಗಳ ಆಗಸದಲ್ಲಿ ಹೊಸಬಗೆಯ ನೀರಿನರೂಪದ ಕಲಾಕ್ರುತಿಗಳು ರಾರಾಜಿಸುತ್ತಿವೆ. ಈ ವಿನೂತನ ಕಲಾಕ್ರುತಿಗಳು ವಾತಾವರಣದ ಮಳೆ, ಚಳಿ, ಗಾಳಿ, ಬಿಸಿಲುಗಳ ಏರುಪೇರಿಗೆ ಸ್ಪಂದಿಸುತ್ತಾ ತನ್ನತನವನ್ನು ಉಳಿಸಿಕೊಂಡು ಜನರ ರಂಜನೆಗೆ ಪಾತ್ರವಾಗಿದೆ. ಮುಸ್ಸಂಜೆಯಲ್ಲಿ ಜಗಮಗಿಸುವ ವಿವಿದ ಬಣ್ಣದ ದೀಪಗಳ ಬೆಳಕಿನಲ್ಲಿ...

ನಂಬಿರುವುದು ನಾವೆಲ್ಲರೂ ನಿನ್ನನೇ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).   ಬರದ ನಾಡಾಗಿದೆ ನಮ್ಮ ಕರ‍್ನಾಟಕ ಬರದೆ ಮಳೆರಾಯ ಏನೀ ನಾಟಕ? ನಿನಗಾಗಿ ಪರಿತಪಿಸುತಿಹನು ರೈತ ಹಗಲಿರುಳು ಬೆಳೆ ಸಿಗದೆ ಹಾಕಿಕೊಳ್ಳುತಿಹನು ಉರುಳು ಬೇಡವೆಂದರು ಅಲ್ಲೆಲ್ಲೋ ಉಕ್ಕಿ ಹರಿಯುತಿದೆ ನದಿಗಳು ಆದರೆ ಬರಿದಾಗುತ್ತ ಬರುತಿದೆ ನಮ್ಮ ಕೆರೆ ಅಣೆಕಟ್ಟುಗಳು ಜಾತಕಪಕ್ಶಿಯಂತೆ...

ಅವನೇ ಸತ್ಯ, ಅವನೇ ನಿತ್ಯ

– ಸುರಬಿ ಲತಾ. ನನ್ನವರು ತನ್ನವರು ಯಾರಿಲ್ಲ ಇಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿ ಬಂದು ಬಳಗ ಬೇಕಿಲ್ಲ ನಿನಗ ಆ ದೇವನೊಬ್ಬನೇ ಮನದೊಳಗ ಬಿಡು ನೀನು ಬಂದನದ ಮೋಹ ಪ್ರೀತಿ ಪ್ರೇಮಗಳ ದಾಹ ಅದರಿಂದ ಸಿಗುವುದು ನೋವು ಹಣ್ಣಾಗಿಸಿಕೋ ಮನಸಿನ ಮಾವು ಕಂಡಿದ್ದೆಲ್ಲಾ ಸತ್ಯವಲ್ಲ...