ಮಾಡಿ ನೋಡಿ ಹಾಗಲಕಾಯಿ ಒಗ್ಗರಣೆ

– ರೂಪಾ ಪಾಟೀಲ್.

‘ಹಾಗಲಕಾಯಿ ನಾಲಗೆಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿ’ ಎನ್ನುವ ಮಾತಿದೆ. ಹಲವು ರೋಗಗಳಿಗೆ ಮನೆಮದ್ದು ಆಗಿರುವ ಹಾಗಲಕಾಯಿಯನ್ನು ಇವತ್ತಿನ ದಿನದಲ್ಲಿ ನಾವು ಬಳಕೆ ಮಾಡುವುದು ಅವಶ್ಯಕತೆ ಅಲ್ಲದೆ ಅನಿವಾರ‍್ಯವೂ ಆಗಿದೆ.

ಬೇಕಾಗುವ ಸಾಮಗ್ರಿಗಳು

ಹಾಗಲಕಾಯಿ – 5
ಒಗ್ಗರಣೆಗೆ ಎಣ್ಣೆ – 5 ಚಮಚ
ಹುರಿದು ಪುಡಿಮಾಡಿಕೊಂಡಿರುವ ಒಣಕೊಬ್ಬರಿ – 2 ಚಮಚ
ಶೇಂಗಾ ಪುಡಿ – 3 ಚಮಚ
ಮಸಾಲೆ ಕಾರ – 2 ಚಮಚ
ಕರಿಬೇವಿನ ಸೊಪ್ಪು 5-6 ಎಲೆ
ಸಾಸಿವೆ-ಜೀರಿಗೆ – 1 ಚಮಚ
ಹುಣಸೆಹಣ್ಣಿನ ರಸ 5-6 ಚಮಚ
ಬೆಲ್ಲ – ನಿಂಬೆಗಾತ್ರದಶ್ಟು
ಉಪ್ಪು – ರುಚಿಗೆ ತಕ್ಕಶ್ಟು
ಬೆಳ್ಳುಳ್ಳಿ – 1

ಮಾಡುವ ಬಗೆ

ಹಾಗಲಕಾಯಿಯನ್ನು ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು ಉಪ್ಪು ನೀರಲ್ಲಿ ಹಾಕಿ ಚೆನ್ನಾಗಿ ತೊಳೆದುಕೊಂಡು, ಕೆಂಬಣ್ಣ ಬರುವರೆಗೆ ಹುರಿಯುವುದು. ಒಗ್ಗರಣೆ ತಯಾರಿಸಿಕೊಳ್ಳಲು ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು, ಎಣ್ಣೆ ಬಿಸಿಯಾದ ಬಳಿಕ ಅದರಲ್ಲಿ ಸಾಸಿವೆ, ಜೀರಿಗೆ, ಕರಿಬೇವಿನ ಎಲೆ, ಬೆಳ್ಳುಳ್ಳಿಯನ್ನು ಹಾಕಿ ಕಲಸಿಕೊಳ್ಳುವುದು. ಒಗ್ಗರಣೆಗೆ ಹುರಿದ ಹಾಗಲಕಾಯಿ, ಕಾರ, ಶೇಂಗಾ ಪುಡಿ, ಕೊಬ್ಬರಿಯ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಶ ಬೇಯಿಸಿಕೊಳ್ಳುವುದು. ನಂತರ ಇದಕ್ಕೆ ರುಚಿಗೆ ತಕ್ಕಂತೆ ಉಪ್ಪು, ಹುಣಸೆಹಣ್ಣಿನ ರಸ, ಬೆಲ್ಲ, ಸ್ವಲ್ಪ ನೀರು ಹಾಕಿ ತಿರುವಿಕೊಳ್ಳಿ. ಬಳಿಕ ಬಾಣಲೆಯ ಮೇಲೆ ಗಟ್ಟಿಯಾಗಿ ತಟ್ಟೆಯನ್ನು ಮುಚ್ಚಿ 5 ನಿಮಿಶ ಕುದಿಸಿದರೆ ಹಾಗಲಕಾಯಿ ಒಗ್ಗರಣೆ ತಯಾರು.

ಹಾಗಲಕಾಯಿಯು ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಸಕ್ಕರೆ ಕಾಯಿಲೆ, ಮೂತ್ರಪಿಂಡದ ಹರಳು ಇಂತಹ ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ.

(ಚಿತ್ರ ಸೆಲೆ: ರೂಪಾ ಪಾಟೀಲ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: