ಕೂಡಿ ಇಟ್ಟು ಮೂಟೆ ಹಣ…

– ಸುಹಾಸ್ ಮೌದ್ಗಲ್ಯ.

ಕೂಡಿ ಇಟ್ಟು ಮೂಟೆ ಹಣ
ತೀರಿಸುವೆಯಾ ತಾಯಿಯ ರುಣ?
ಇರುವವರೆಗೂ ನಿನ್ನ ಪ್ರಾಣ
ಮರೆಯದಿರು ತಾಯಿಯ ರುಣ

ಉರಿದು ಕರಗಿದರೂ ಬೆಳಕ ಚೆಲ್ಲುವ ಮೇಣ
ಚೂರಾದರೂ ಪ್ರತಿಬಿಂಬ ತೋರುವ ದರ‍್ಪಣ
ಬೇಕಾದ ಆಕಾರ ಪಡೆಯುವ ಕಾದ ಕಬ್ಬಿಣ
ಸಾರುತಿಹುದು ತಾಯಿಯ ಗುಣ

ಮಗುವಿನ ನಗುವಿಗೆ ತಾಯಿ ಕಾರಣ
ಮಗುವಿನ ಏಳಿಗೆಗೆ ತಾಯಿ ಪ್ರೇರಣ
ಮಗುವಿನ ಕನಸಿಗೆ ತಾಯಿ ಹೂರಣ
ತಾಯಿ ಇಲ್ಲದೆ ಜೀವನ ಕಟಿಣ

ಹಾಡಿಗೆ ಲಕ್ಶಣ ಅದರ ಚರಣ
ಬಾಗಿಲಿಗೆ ಲಕ್ಶಣ ಹಸಿರು ತೋರಣ
ಹೆಣ್ಣಿನ ಹಣೆಗೆ ಕುಂಕುಮ ಲಕ್ಶಣ
ಮನೆಗೆ ತಾಯಿಯೇ ಬೂಶಣ

( ಚಿತ್ರ ಸೆಲೆ:  love_of_mother_is_priceless )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: