ಅರಿವಿನ ದೀಪವ ಬೆಳಗಿರಿ

– ಸಿಂದು ಬಾರ‍್ಗವ್.

ಹೊತ್ತಗೆ, Book

ಬೆಳಕಿನ ಕೆಳಗೆ ಕತ್ತಲಿದೆ
ನೋವಿನ ಜೊತೆಗೆ ನಲಿವು ಇದೆ
ದೀಪವ ಬೆಳಗಿರಿ
ಅರಿವಿನ ದೀಪವ ಬೆಳಗಿರಿ

ಸೋಲಿನ ಹಿಂದೆ ಗೆಲುವು ಇದೆ
ಸಾದನೆಯ ಹಿಂದೆ ಚಲವು ಇದೆ
ದೀಪವ ಬೆಳಗಿರಿ
ಅರಿವಿನ ದೀಪವ ಬೆಳಗಿರಿ

ಹಗಲಿನ ಹಿಂದೆ ಇರುಳು ಇದೆ
ಬಿಸಿಲಿನ ಹಿಂದೆ ನೆರಳು ಇದೆ
ದೀಪವ ಬೆಳಗಿರಿ
ಅರಿವಿನ ದೀಪವ ಬೆಳಗಿರಿ

ಕೆಡುಕಿನ ಹಿಂದೆ ಒಳಿತು ಇದೆ
ಶ್ರಮದ ಹಿಂದೆ ಪಲವು ಇದೆ
ದೀಪವ ಬೆಳಗಿರಿ
ಅರಿವಿನ ದೀಪವ ಬೆಳಗಿರಿ

ಹಮ್ಮಿನ ಹೊರತು ವಿನಮ್ರವಿದೆ
ಮತ್ಸರದ ಹೊರತು ಸತ್ಸಂಗವಿದೆ
ದೀಪವ ಬೆಳಗಿರಿ
ಅರಿವಿನ ದೀಪವ ಬೆಳಗಿರಿ

ಅಕ್ಶರದ ಒಳಗೆ ಗ್ನಾನವಿದೆ
ಸುಗ್ನಾನದ ಒಳಗೆ ವಿನಯವಿದೆ
ದೀಪವ ಬೆಳಗಿರಿ
ಅರಿವಿನ ದೀಪವ ಬೆಳಗಿರಿ

ಮೋಹದ ಮಾತಲಿ ಕಾಮವಿದೆ
ತಳುಕಿನ ನಡೆಯಲಿ ಕಪಟವಿದೆ
ದೀಪವ ಬೆಳಗಿರಿ
ಅರಿವಿನ ದೀಪವ ಬೆಳಗಿರಿ

ಹಿರಿಯರ ಮಾತಲಿ ಸತ್ಯವಿದೆ
ಸತ್ಯದ ಹಾದಿಯಲಿ ಸಗ್ಗವಿದೆ
ದೀಪವ ಬೆಳಗಿಸಿರಿ
ನಿಮ್ಮಯ ಮನವನು ಅರಳಿಸಿರಿ

( ಚಿತ್ರ ಸೆಲೆ: pexels.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: