ನವಣೆ ತಂಬಿಟ್ಟು
– ಸವಿತಾ.
ಬೇಕಾಗುವ ಪದಾರ‍್ತಗಳು:
1 ಲೋಟ ನವಣೆ
1 ಚಮಚ ಅಕ್ಕಿ
1 ಚಮಚ ಕಡಲೆಬೇಳೆ
1 1/2 ಲೋಟ ನೀರು
1/2 ಲೋಟ ಬೆಲ್ಲ
4 ಏಲಕ್ಕಿ
1 ಚಿಟಿಕೆ ಜಾಯಿ ಕಾಯಿ ಪುಡಿ
ಸ್ವಲ್ಪ ತುಪ್ಪ
ಮಾಡುವ ಬಗೆ:
ನವಣೆ, ಸಾದಾ ಅಕ್ಕಿ ಮತ್ತು ಕಡಲೇ ಬೇಳೆ ಮೂರನ್ನು ಒಟ್ಟಿಗೆ ಹುರಿದು, ನಂತರ ಮಿಕ್ಸರ್ ನಲ್ಲಿ ಪುಡಿಮಾಡಿ ಇಟ್ಟುಕೊಳ್ಳಿ.
ನೀರು ಕಾಯಿಸಿ ಒಂದು ಕುದಿ ಬಂದ ಮೇಲೆ ಬೆಲ್ಲ ಸೇರಿಸಿ, ಬೆಲ್ಲ ಕರಗುವಾಗ ಮೊದಲು ಮಾಡಿಟ್ಟ ಪುಡಿ ಅತವಾ ಹಿಟ್ಟನ್ನು ಸೇರಿಸಿ ಚೆನ್ನಾಗಿ ತಿರುವಿ. ಸಣ್ಣ ಉರಿಯಿಟ್ಟು ತಿರುವಿ ಹಾಕಿದರೆ ತಂಬಿಟ್ಟು ತಯಾರಾಯಿತು. ಸ್ವಲ್ಪ ಆರಲು ಬಿಟ್ಟು ಉಂಡೆ ಮಾಡಿ ಇಟ್ಟುಕೊಳ್ಳಿ. ಇದನ್ನ ತುಪ್ಪದ ಜೊತೆ ಬಡಿಸಬೇಕು.
(ಚಿತ್ರ ಸೆಲೆ: ಸವಿತಾ. )
ಇತ್ತೀಚಿನ ಅನಿಸಿಕೆಗಳು