ಮೊಳಕೆ ಬರಿಸಿದ(ಕಟ್ಟಿದ) ಹುರುಳಿ ಕಾಳು ಪಲ್ಯ

– ಸವಿತಾ.

ಮೊಳಕೆ ಬರಿಸಿದ(ಕಟ್ಟಿದ) ಹುರುಳಿ ಕಾಳು ಪಲ್ಯ

ಏನೇನು ಬೇಕು?

1 ಬಟ್ಟಲು ಹುರುಳಿ ಕಾಳು
2 ಹಸಿ ಮೆಣಸಿನ ಕಾಯಿ
3-4 ಚಮಚ ಎಣ್ಣೆ
5-6 ಕರಿಬೇವು ಎಲೆ
1 ಈರುಳ್ಳಿ
1/2 ಚಮಚ ಸಾಸಿವೆ, ಜೀರಿಗೆ
1/2 ನಿಂಬೆ ಹಣ್ಣು ರಸ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಶ್ಟು ಉಪ್ಪು
ಸ್ವಲ್ಪ ಅರಿಶಿಣ

ಮಾಡುವ ಬಗೆ

ಹುರುಳಿ ಕಾಳನ್ನು ನೀರಿನಲ್ಲಿ ಒಂದು ದಿನ ನೆನೆಯಲು ಬಿಡಬೇಕು. ಮರುದಿನ ತೆಳುವಾದ ಬಟ್ಟೆಯಲ್ಲಿ ಒಂದು ದಿನ ಕಟ್ಟಿ ಇಡಬೇಕು. ಮಾರನೇ ದಿನ ಮೊಳಕೆ ಬರುವುದು. ಒಂದು ಚಮಚ ಎಣ್ಣೆ ಹಾಕಿ ಮೊಳಕೆ ಬಂದ ಹುರುಳಿ ಕಾಳನ್ನು ಹುರಿದು ತೆಗದಿಟ್ಟುಕೊಳ್ಳಿ.

ಒಂದು ಈರುಳ್ಳಿ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಹಸಿ ಮೆಣಸಿನ ಕಾಯಿ ಕತ್ತರಿಸಿ ಇಟ್ಟುಕೊಳ್ಳಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಕತ್ತರಿಸಿ ಇಟ್ಟುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ ಸಿಡಿಸಿ ಕರಿಬೇವು, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಹುರಿಯಿರಿ. ಹುರಿದ ಹುರುಳಿ ಕಾಳು ಸೇರಿಸಿ ಇನ್ನೊಮ್ಮೆ ಹುರಿಯಿರಿ. ಉಪ್ಪು, ಅರಿಶಿಣ ಮತ್ತು ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ.

ಈಗ ಪಲ್ಯ ತಯಾರು ಆಯಿತು. ನಿಂಬೆ ರಸ ಸೇರಿಸಿ ಮತ್ತು ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮೇಲೆ ಹಾಕಿ ಚಪಾತಿ ಅತವಾ ರೊಟ್ಟಿ ಜೊತೆ ತಿನ್ನಲು ಕೊಡಿ.

ಉತ್ತರ ಕರ‍್ನಾಟಕದ ಕಡೆ ಹೆಚ್ಚಾಗಿ ಮಾಡುವ ಪಲ್ಯವಿದು. ಬಲು ಆರೋಗ್ಯಕರ ಪಲ್ಯವೂ ಕೂಡ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: