ಕವಿತೆ: ಮಳೆರಾಯ

ಶಶಾಂಕ್.ಹೆಚ್.ಎಸ್.

ಮೋಡ, cloud

ಮಳೆ ಇಲ್ಲ ಬೆಳೆ ಇಲ್ಲ
ಬತ್ತಿದೆ ಜೀವಜಲ
ಬಾಡಿದೆ ರೈತನ ಮೊಗ
ಹನಿ ನೀರಿಗೂ ಪರಿತಪಿಸುತ್ತಿದೆ ಜೀವಸಂಕುಲ

ವರುಣನ ಆಗಮನದ ಸಿಂಚನಕ್ಕೆ ಕಾದು
ಕುಳಿತ ರೈತನ ಮೊಗದಲ್ಲೀಗ ಕರಿಮೋಡದ ಚಾಯೆ
ಇಲ್ಯಾರು ತಿಳಿದವರಿಲ್ಲ ಮಳೆರಾಯನ ಮಾಯೆ

ರೈತನ ಬದುಕು ಬರಡಾಗಿದೆ
ಬೂಮಿಯ ಹೊಳಪು ಕಳೆಗುಂದುತ್ತಿದೆ
ನೀರಿಲ್ಲದೆ ಕುಣಿಕೆಗೆ ಕೊರಳೂಡ್ಡಿ
ರೈತಾಪಿವರ‍್ಗದ ಬದುಕು ಕೊನೆಯಾಗುತ್ತಿದೆ

ಓ ಮಳೆರಾಯ ದರೆಗೆ ಬಾ
ಮಣ್ಣಿನ ಮಕ್ಕಳ ಕಣ್ಣೀರ ಒರೆಸು ಬಾ
ರೈತನ ಕಶ್ಟದ ಬವಣೆಯ ನೀಗಿಸು ಬಾ
ಸಕಲ ಜೀವ ಸಂಕುಲವ ಉಳಿಸು ಬಾ

ವರುಣನೇ ದಯಮಾಡಿ ಕರುಣೆ ತೋರಯ್ಯ
ರೈತನ ಬದುಕ ಹಸಿರಾಗಿಸಯ್ಯ

( ಚಿತ್ರ ಸೆಲೆ : publicdomainpictures.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks