ಕವಿತೆ: ಸಂಕ್ರಾಂತಿ – ನಿಜಸಂತಿ

– ಚಂದ್ರಗೌಡ ಕುಲಕರ‍್ಣಿ.

ಸಂಕ್ರಾಂತಿ, sankrani

ಬಂತು ಬಂತದೊ ಸಂಕ್ರಾಂತಿ
ಶ್ರಮದ ಬಾಳಿನ ನಿಜಸಂತಿ

ಸೊಗದ ನುಡಿಯಲಿ ನಗೆಯ ಅರಳಿಸಿ
ಹೂವು ಹಾಸನು ಹಾಸಿತು
ಸೂಸು ಗಾಳಿಗೆ ಬೆರೆತು ಪರಿಮಳ
ನೋವು ಆಲಸಿಕೆ ಕಳೆಯಿತು

ಎಳ್ಳು ಬೆಲ್ಲದ ರುಚಿಯ ಮೋಡಿಯು
ಜನರ ಮನವನು ಸೆಳೆಯಿತು
ಕಬ್ಬು ತೆಂಗಿನ ಬಾಳೆಗರಿಗಳ
ಸ್ವರ‍್ಗ ಲೋಕವೆ ಮೊಳೆಯಿತು

ಹಾಲು ಹೈನದ ಮದುರ ಜೇನಿನ
ಹೊನಲು ದರೆಯಲಿ ಹರಿಯಿತು
ವರುಶವೊಂದರ ಹರುಶವೆಲ್ಲವು
ಪರುಶ ಬಾವದಿ ಮೆರೆಯಿತು

ಚಳಿಯ ಒಲುಮೆಗೆ ಜೀವ ಜೀವದ
ಪುಳಕ ಕಚಗುಳಿ ಹೆಚ್ಚಿತು
ಬೆಳೆದ ಪೈರಿನ ಚುಳುಕು ಹಾಲ್ಸವಿ
ಲೋಕ ಲೋಕವೆ ಮೆಚ್ಚಿತು

(ಚಿತ್ರ ಸೆಲೆ: pngfuel.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: