ಶೇಂಗಾ ಕಾಳು ಪಲ್ಯ
– ಸವಿತಾ.
ಬೇಕಾಗುವ ಸಾಮಾನುಗಳು
- ಶೇಂಗಾ ಕಾಳು – 1 ಬಟ್ಟಲು
- ಈರುಳ್ಳಿ – 1
- ಟೊಮೋಟೊ – 1
- ಬೆಳ್ಳುಳ್ಳಿ – 4 ಎಸಳು
- ಹಸಿ ಶುಂಟಿ – 1/4 ಇಂಚು
- ಮಸಾಲಾ ಕಾರದ ಪುಡಿ – 2-3 ಚಮಚ
- ಸಾಸಿವೆ – 1/4 ಚಮಚ
- ಜೀರಿಗೆ – 1/4 ಚಮಚ
- ಹುಣಸೆ ಹಣ್ಣಿನ ರಸ – 1 ಚಮಚ
- ಬೆಲ್ಲದ ಪುಡಿ – 2 ಚಮಚ
- ಎಣ್ಣೆ – 4 ಚಮಚ
- ಕರಿಬೇವು – ಸ್ವಲ್ಪ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಅರಿಶಿಣ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಶೇಂಗಾ ಅತವಾ ಕಡಲೆಬೀಜ ಕುಕ್ಕರ್ ನಲ್ಲಿ ಒಂದು ಕೂಗು ಬರುವವರೆಗೆ ಕುದಿಸಿ ಇಳಿಸಿ. ಈರುಳ್ಳಿ, ಟೊಮೋಟೊ ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಹುಣಸೆ ಹಣ್ಣು ನೆನೆಸಿ ರಸ ಮಾಡಿ ಇಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಮೊದಲು ಸಾಸಿವೆ, ಜೀರಿಗೆ ಹಾಕಿ, ನಂತರ ಸ್ವಲ್ಪ ಕರಿಬೇವು ಸೇರಿಸಿ ಹುರಿದುಕೊಳ್ಳಿ. ಕೊಂಚ ಹೊತ್ತಿನ ಬಳಿಕ ಬೆಳ್ಳುಳ್ಳಿ, ಹಸಿ ಶುಂಟಿ ಜಜ್ಜಿ ಹಾಕಿಕೊಳ್ಳಿ. ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಬೆಂದ ಮೇಲೆ ಕುದಿಸಿದ ಶೇಂಗಾ ಸೇರಿಸಿ ಕಲಸಿಕೊಳ್ಳಿ. ಕತ್ತರಿಸಿದ ಟೊಮೋಟೊ ಹಾಕಿ ಹುರಿದು ಉಪ್ಪು ಅರಿಶಿಣ ಮತ್ತು ಮಸಾಲಾ ಕಾರ ಸೇರಿಸಿ ಕಲಸಿ. ಹುಣಸೆ ರಸ ಮತ್ತು ಬೆಲ್ಲ ಹಾಕಿ ಒಂದು ಕುದಿ ಕುದಿಸಿ ಇಳಿಸಿ.
ಮೇಲೆ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಈಗ ಶೇಂಗಾ ಕಾಳು ಪಲ್ಯ ಸವಿಯಲು ಸಿದ್ದ. ಇದನ್ನು ಹೆಚ್ಚಾಗಿ ಬಿಜಾಪುರದ ಕಡೆ ಮಾಡಲಾಗುತ್ತದೆ.
ಇತ್ತೀಚಿನ ಅನಿಸಿಕೆಗಳು