ಸಾಂಬಾರ್ ಬುತ್ತಿ

– ಸವಿತಾ.

sambar butti, ಸಾಂಬಾರ್ ಬುತ್ತಿ

ಬೇಕಾಗುವ ಸಾಮಾನುಗಳು

  • ಅಕ್ಕಿ – 1 ಲೋಟ
  • ಎಣ್ಣೆ – 4 ಚಮಚ
  • ಕರಿಬೇವು ಎಲೆ – 20
  • ಜೀರಿಗೆ – 1/2 ಚಮಚ
  • ಸಾಸಿವೆ – 1/2 ಚಮಚ
  • ಉದ್ದಿನಬೇಳೆ – 1 ಚಮಚ
  • ಶೇಂಗಾ – 2 ಚಮಚ
  • ಇಂಗು – 1/4 ಚಮಚ
  • ಬೆಳ್ಳುಳ್ಳಿ – 20 ಎಸಳು
  • ಹಸಿ ಮೆಣಸಿನಕಾಯಿ – 1
  • ಒಣ ಮೆಣಸಿನ ಕಾಯಿ – 1
  • ಒಣ ಕಾರದ ಪುಡಿ – 1 ಚಮಚ (ಮಸಾಲಾ ಕಾರದ ಪುಡಿ ಬಳಸಬಹುದು)
  • ಹುಣಸೆ ಹಣ್ಣು – ನಿಂಬೆ ಗಾತ್ರದಶ್ಟು
  • ಬೆಲ್ಲ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು
  • ಅರಿಶಿಣ – ಸ್ವಲ್ಪ
  • ಹುಳಿ ಪುಡಿ ಅತವಾ ಸಾಂಬಾರ್ ಪುಡಿ – 1 ಚಮಚ
  • ಈರುಳ್ಳಿ – 1
  • ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/4 ಬಟ್ಟಲು

ಮಾಡುವ ಬಗೆ

ಮೊದಲು ಅನ್ನ ಮಾಡಿಟ್ಟುಕೊಳ್ಳಿ. ಕುಕ್ಕರ್ ನಲ್ಲಿ ಆದರೆ ಮೂರು ಕೂಗು ಕುದಿಸಿ ಇಳಿಸಿ. ಆರಿದ ನಂತರ ಕೈಯಿಂದ ಅನ್ನ ಕಲಸಿ ಮೆದು ಮಾಡಿ ಇಟ್ಟುಕೊಳ್ಳಿ. ಈರುಳ್ಳಿ, ಹಸಿ ಮೆಣಸಿನಕಾಯಿ, ಒಣ ಮೆಣಸಿನ ಕಾಯಿ ಸಣ್ಣಗೆ ಕತ್ತರಿಸಿ. ಬೆಳ್ಳುಳ್ಳಿ ಸಿಪ್ಪೆ ಸುಲಿದು ಜಜ್ಜಿ ಇಟ್ಟಿರಿ. ಕೊತ್ತಂಬರಿ ಸೊಪ್ಪು ಕತ್ತರಿಸಿ ಇಟ್ಟುಕೊಳ್ಳಿ. ಹುಣಸೆ ಹಣ್ಣು ನೀರಿನಲ್ಲಿ ನೆನೆಸಿ ಇಡಿ.

ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು ಸ್ವಲ್ಪ ಹಾಕಿ ಹುರಿಯಿರಿ. ಇಂಗು, ಉದ್ದಿನ ಬೇಳೆ ಹಾಕಿ, ಸ್ವಲ್ಪ ಹೊತ್ತಿನ ಮೇಲೆ ಕಡಲೆಬೀಜ, ಕತ್ತರಿಸಿದ ಹಸಿ ಮೆಣಸಿನಕಾಯಿ, ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಜಜ್ಜಿದ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದು ನಂತರ ಉಪ್ಪು ಅರಿಶಿಣ ಹಾಕಿ. ಹುಣಸೇ ರಸ, ಬೆಲ್ಲ ಮತ್ತು ಸಾಂಬಾರ್ ಪುಡಿ ಸೇರಿಸಿ ಕಲಸಿ. ಮೇಲೆ ಒಣ ಕಾರದ ಪುಡಿ ಸೇರಿಸಿ, ಸ್ವಲ್ಪ ಕುದಿಸಿ ಇಳಿಸಿ.

ಸ್ವಲ್ಪ ಆರಿದ ಮೇಲೆ ಅನ್ನ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಉಂಡೆ ಕಟ್ಟಿ ಇಟ್ಟುಕೊಳ್ಳಿ. ಸಾಂಬಾರ್ ಬುತ್ತಿ ಸವಿಯಲು ಸಿದ್ದ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ ಊಟದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: