ಕವಿತೆ : ಜೀವನ ಜೋಕಾಲಿ
ಜೀವನವೆಂಬುದೇ
ಜೋಕಾಲಿ ಕಾಲದ ಓಟಕೆ
ನಿತ್ಯವೂ ಜೀಕುತ
ತೂಗುತ ಸಾಗಿಸಬೇಕಿದೆ
ಜೀವನವೆಂಬ ಜೋಕಾಲಿ
ಜೀಕುವ ಜೋಕಾಲಿಗೆ
ಹಗ್ಗದ ಜೋಡಿಯೇ ಆದಾರ
ಹಲಗೆಯೇ ತಳಪಾಯ
ಬದುಕಿನ ಜೋಕಾಲಿಗೆ
ಸತ್ಯ ನಂಬಿಕೆಯೇ ಆದಾರ
ನೈತಿಕ ನಡೆಯೇ
ತಳಪಾಯ
ಜೀಕುವ ಜೋಕಾಲಿಗೆ
ನೀ ಹತ್ತಿ ಕುಳಿತು ಚಾಲನೆ
ನೀಡಿದರೆ ಸಾಗುವುದು
ಮುಂದೆ ಸಾಗುವುದು
ನಿನ್ನಯ ಶಕ್ತಿ ನಿನ್ನಯ ಸ್ತೈರ‍್ಯವೇ
ಸಾಗುವ ವೇಗಕೆ ಸಾಕ್ಶಿಗಳು
ಬದುಕಿನ ಜೀಕಿಗೆ ಸಾಗುವ
ವೇಗಕೆ ನಿನ್ನ ಗಂಡೆದೆ ಗುಂಡಿಗೆ
ಬಿಗಿಯಾದ ನಂಬಿಕೆ ಇವರೇ
ನೋಡಿ ಅಸಲಿ ಒಡೆಯರು
ಬದುಕಿನ ಜೋಕಾಲಿ
ಹತ್ತಿ ರಬಸದಿ ಜೀಕಿ ಮುಗಿಲ
ಮುಟ್ಟುವಂತೆ ಬದುಕಿನ
ಗುರಿಯನು ತಲುಪಿ
ಸಾರ‍್ತಕ್ಯಗೊಳ್ಳಲಿ ಬದುಕೆಂಬ
ಜೋಕಾಲಿ
ನಿರಾತಂಕವಾಗಿ ನಿತ್ಯ ಸಾಗಲಿ
ಬದುಕೆಂಬ ಜೀಕಿನ
ಜೋಕಾಲಿ
( ಚಿತ್ರಸೆಲೆ : themerrythought.com )
ಇತ್ತೀಚಿನ ಅನಿಸಿಕೆಗಳು