ಕವಿತೆ: ವೈರಾಗ್ಯ
ಸಂಸಾರ ಬಂದನದ ಮೋಹವನು
ತೊರೆಯುವುದು ವೈರಾಗ್ಯ
ಸನ್ಯಾಸ ಸ್ವೀಕರಿಸಿ ಬಗವಂತನ
ನುತಿಸುವುದು ವೈರಾಗ್ಯ
ಸತ್ಯಾಸತ್ಯತೆ ಜಿಜ್ನಾಸೆಗಳ ಒರೆಗಲ್ಲಿಗೆ
ಹಚ್ಚಿ ನೋಡುತ್ತಿರು
ಸುಮಾರ‍್ಗದಲಿ ಸಾಗುತ ಪರಹಿತವನು
ಬಯಸುವುದು ವೈರಾಗ್ಯ
ಅರಿಶಡ್ವರ‍್ಗಗಳ ಗೆಲ್ಲುತ ಇಹದಲ್ಲಿ
ಮೋಕ್ಶವ ಅರಸು ನೀನು
ಅಶ್ಟಾದಶ ಪುರಾಣಗಳ ಸಾರವನು
ತಿಳಿಯುವುದು ವೈರಾಗ್ಯ
ನೀತಿಯನು ಜಗದೊಳಗೆ ಬಿತ್ತುತ
ಕೌಮುದಿಯಾಗಿ ಹೊರಟೆ
ನಿಸ್ವಾರ‍್ತ ನಿರಹಂಕಾರ ಗುಣವನ್ನು
ತೋರಿಸುವುದು ವೈರಾಗ್ಯ
ಇಹಲೋಕದ ಬಂದಗಳ ಬಿಡಿಸುವ
ಸನ್ಮಾರ‍್ಗದ ಹಾದಿಯಿದು
ಕಹಳೆಯೂದಿ ಕರ‍್ಣದಲಿ ಅಹ್ನಿಯನು
ಓಡಿಸುವುದು ವೈರಾಗ್ಯ
ಜನನ ಮರಣಗಳ ಚಕ್ರದಲಿ ತಿರ‍್ರನೆ
ತಿರುಗಿಸಿ ಬಿಡುವದು ನೋಡು
ತನನ ತಾಂತನನ ಗೆಜ್ಜೆ ಕಟ್ಟಿ ನ್ರುತ್ಯದಿ
ಕುಣಿಸುವುದು ವೈರಾಗ್ಯ
ಒಡಲೊಳಗಿನ ವಹ್ನಿಯಂತೆ ಕವಿ
ಅಬಿನವನ ನುಡಿ
ಜಡವಸ್ತುವಲ್ಲಿ ಆದ್ಯಾತ್ಮ ಬಾವನೆಯ
ತುಂಬಿಸುವುದು ವೈರಾಗ್ಯ
(ಚಿತ್ರ ಸೆಲೆ: mindfulmuscle.com)
ತುಂಬಾ ಚನ್ನಾಗಿ ಬರಿತೀರ ಗುರುಗಳೆ