ಕವಿತೆ: ನೆನಪುಗಳು

– ವಿನು ರವಿ.

ಮನಸು, Mind, memories, ನೆನಪು

ಸುಮ್ಮನೆ ಸುರಿಯುತ್ತಿವೆ
ಸೋನೆ ಮಳೆಯಂತೆ
ಅಲ್ಲಲ್ಲಿ ಹೆಪ್ಪುಗಟ್ಟಿವೆ
ನಿಂತ ನೀರಿನಂತೆ

ಬಾವಗಳ ಆರ‍್ದ್ರಗೊಳಿಸಿವೆ
ಹಸಿ ಮಣ್ಣಿನೊಳಗೆ ಬೆರೆತು
ಮೊಳಕೆಯೊಡೆವ ಚಿಗುರಂತೆ
ಕೊರೆಯುತ್ತವೆ ಮಂಜುಗಡ್ಡೆಯಂತೆ

ಸುಡುತ್ತವೆ ನಡುನೆತ್ತಿಯ ಸೂರ‍್ಯನಂತೆ
ಬಣ್ಣ ತುಂಬಿವೆ
ಮೇಲೆ ಮಿನುಗುವ ತಾರೆಗಳಂತೆ

ಮತ್ತೆ ಮತ್ತೆ ಕಾಡುತ್ತವೆ
ರುತುಗಳು ಬದಲಾದಂತೆ
ಸುಮ್ಮನೆ ಸುರಿಯುತ್ತಲೆ ಇವೆ
ಜೀವ ರಾಗಕೆ ಮಿಡಿವಂತೆ

(ಚಿತ್ರಸೆಲೆ : sloanreview.mit.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: