ಕವಿತೆ: ಸುಂಟರಗಾಳಿ

– .

ಅಬ್ಬರಿಸಿ ಉಬ್ಬರಿಸಿದೆ
ಏದುರುಸಿರು ಬಿಡುತ್ತಾ
ಬುಸುಗುಟ್ಟುವ ಹಾವಿನಂತೆ
ಬಿರುಬಿಸಿಲನ್ನು ಸೀಳಿ
ಬರುತ್ತಿದೆ ನೋಡು ಸುಂಟರಗಾಳಿ

ಸಣ್ಣ ಸಣ್ಣ ಸೂಡಿಗಳು
ಆರಿಹೋಗಿವೆ
ಮನೆಮಟಗಳು ಜಕಂಗೊಂಡು
ಬಾಳು ನೆಲಕ್ಕಚ್ಚಿದೆ
ಕಣ್ತೆಗೆದರೂ, ಮುಚ್ಚಿದರೂ
ಅಕ್ಶಿಗೆ ಗೋಚರ ರೌದ್ರನರ‍್ತನದ
ವಿಚಿತ್ರ ಆ ಸುಂಟರಗಾಳಿ

ವಿನೀತ ಬಾವವಿಲ್ಲದ
ವಿಶಾದ ಚಾಯೆಯಲ್ಲಿ
ಅವಕಾಶಕ್ಕೆ ಹೊಂಚುಹಾಕಿ
ಕಾತುರದಲ್ಲಿ ಕಾಯುತ್ತಲಿದೆ
ಹೊಟ್ಟೆಬಾಕನಂತೆ
ತೈ ತೈ ಎಂದು ಹಾರಿ
ಜಿಗಿದು, ಕುಣಿದು, ನೆಗೆದು ಬರುತ್ತಿದೆ
ಮೈನಡುಗಿಸುವ ಸುಂಟರಗಾಳಿ

ಗಗನದ ಮಾಯಾ ಕಂಬವಿದು
ಐಪೆಲ್ ಟವರಿಗಿಂತ ಎತ್ತರ
ಕೂಪಕ್ಕಿಂತಲೂ ಆಳ
ವಾಚಾಮಗೋಚರದ
ಚಮತ್ಕಾರ ತೋರುತಿದೆ
ರಕ್ಕಸದಲೆಯ ಸುಂಟರಗಾಳಿ

ತನ್ನೊಡಲ ತೆಕ್ಕೆಗೆ
ಸೆಳೆದುಕೊಳ್ಳುತಿದೆ
ಮಕ್ಕಳು ಮರಿಯೆನ್ನದೆ
ನಿಶ್ಕರುಣಿಯಾಗಿ

ನಿಲ್ಲಿಸು ನಿನ್ನಾಟವನ್ನು
ಶಾಪವದು ಕೊರಳ ಕುತ್ತಾಗಿ
ಆಪತ್ತು ತರುವದು
ಇನ್ನಾದರು ಬಿಟ್ಟುಬಿಡು
ಸುಂಟರಗಾಳಿ
ನಿನ್ನ ಕೆಟ್ಟ ಚಾಳಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *