ಕವಿತೆ: ಪರಶಿವ

– ಶ್ಯಾಮಲಶ್ರೀ.ಕೆ.ಎಸ್.

ದೇವಾನುದೇವತೆಗಳ ದೈವನಿವ
ಹರ ಹರ ಮಹಾದೇವ
ಮೂಜಗದ ದೊರೆ ಮುಕ್ಕಣ್ಣನಿವ
ಪಾರ‍್ವತೀ ಪ್ರಿಯ ವಲ್ಲಬ ಪರಶಿವ

ನಾಟ್ಯಸ್ವರೂಪಿ ನಟರಾಜನೀತ
ನಂಜನುಂಡ ನಂಜುಂಡೇಶ್ವರನೀತ
ರೌದ್ರಾವತಾರಿ ರುದ್ರೇಶ್ವರನೀತ
ವಿಶ್ವರೂಪಿ ವಿಶ್ವೇಶ್ವರನೀತ

ಜಗವಾಳೊ ಜಗದೊಡೆಯ ಜಗದೀಶ್ವರ
ಲೋಕಪಾಲಕ ಲೋಕೇಶ್ವರ
ಜಟಾದಾರಿ ಗಂಗಾದರ
ಕರುಣಾಳು ಕರುಣಾಕರ ಶಂಕರ

ಮಾಗ ಮಾಸದ ಚತುರ‍್ದಶಿಯಂದು
ಮಹೇಶ್ವರನ ನೆನೆವ ಸುದಿನವದು
ಶಿವಾರಾದನೆಗೆ ವಿಶೇಶ ದಿನವದು
ಮಹಾಶಿವರಾತ್ರಿಯ ಶುಬದಿನವದು

ಬಕ್ತ ಕೋಟಿಯು ಬಿಲ್ವಪತ್ರೆಗಳ ಅರ‍್ಪಿಸಿ
ಕೈಲಾಸವಾಸಿಯ ಸ್ಮರಿಸಿ
ಉಪವಾಸ ಜಾಗರಣೆಗಳ ಮಾಡಿ, ಹರನ ಆರಾದಿಸಿ
ಶಿವನೊಲುಮೆಗೆ ಕಾಯ್ವರು ಬಕ್ತಿಯಿಂದ ಸ್ತುತಿಸಿ

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: