ಕವಿತೆ: ಯುಗಾದಿ ಬಂತು
ಯುಗಾದಿ ಬಂತು ಯುಗಾದಿ
ಹಾಕುತಾ ಹೊಸ ಬದುಕಿಗೆ ಬುನಾದಿ
ತೋರಿದೆ ಹೊಸ ಹರುಶಕೆ ಹಾದಿ
ಹರಿಸಿದೆ ಸಂಬ್ರಮದ ಜಲದಿ
ಚೈತ್ರ ಮಾಸವು ಮುದದಿ ಬಂದಿದೆ
ವಸಂತ ರುತುವಿನ ಕಲರವ ಕೇಳೆಂದಿದೆ
ಹೊಂಗೆ ಚಿಗುರಿನ ಸೊಗಸ ನೋಡೆಂದಿದೆ
ಮಾವಿನ ತಳಿರು ತೋರಣ ತಂಪೆರೆದಿದೆ
ಬೇವು ಬೆಲ್ಲದ ಕಹಿ ಸಿಹಿಯು ಬೆರೆತು
ಇಶ್ಟ ಕಶ್ಟಗಳೊಂದಿಗೆ ಕಲೆತು
ಕಳೆದುದೆಲ್ಲವ ಮರೆತು
ಹಬ್ಬಕ್ಕೆ ಜೀವಕಳೆಯ ತಂತು
ಸಂವತ್ಸರಗಳು ಉರುಳಿ
ಹೊಲಸು ಹಳತನವೆಲ್ಲಾ ತೆರಳಿ
ಹಿರಿತನ ಹೊಸತನವು ಅರಳಿ
ಬದುಕ ಸವಿಯಬೇಕಿದೆ ಸಂತಸದಿ ಬಾಳಿ
(ಚಿತ್ರ ಸೆಲೆ: mangalorean.com)
ಇತ್ತೀಚಿನ ಅನಿಸಿಕೆಗಳು