ಕವಿತೆ: ನೀ ಬುದ್ದನಾಗಲಾರೆ
ಹೇ ಮರ್ಕಟ ಮನವೆ
ನಿನಗೆ ಬುದ್ದನಾಗುವ ಆಸೆಯೆ?
ಬಾಲ್ಯದ ತುಂಟಾಟವ
ಕರುಳು ಕುಕ್ಕುವ ಹೆಂಡವ
ಶ್ವಾಸ ಸುಡುವ ಕೆಂಡವ
ನೀ ಬಿಡಲಿಲ್ಲ
ಯೌವನದ ತುಂಟಾಟ
ಪರಸ್ತ್ರೀಯರ ಪಲ್ಲಂಗ
ಸಂಸಾರಗಳ ಚೆಲ್ಲಾಟ
ನೀ ಮರೆಯಲಿಲ್ಲ
ನಡು ರಾತ್ರಿಯಲಿ
ಬವ ಬಂದನಗಳ ತೊರೆಯಲು
ಮನೆ ಮಡದಿ ಮಕ್ಕಳ
ನೀ ತೊರೆಯಲಿಲ್ಲ
ಮುಪ್ಪಿನಲ್ಲಿ ಜೀವನ ಪಿಚ್ಚೆನಿಸಿ
ನೀ ಹೊರಟಿರುವೆ
ಅಪ್ಪಿತಪ್ಪಿ ಜ್ನಾನೋದಯ
ಆದೀತೆಂಬ ಆಸೆಯಿಂದ
ಹೇ ಮರ್ಕಟ ಮನವೆ
ನಿನಗೆ ಬುದ್ದನಾಗುವ ಆಸೆಯೆ?
ಆದರೂ… ನೀ ಬುದ್ದನಾಗಲಾರೆ
ಬುದ್ದನಾಗುವುದೆಂದರೆ ಎಂದರೆ
‘ಮುಪ್ಪು ಸವೆಸುವ’ ಮಾರ್ಗವಲ್ಲ
‘ಮನಸ್ಸ ಮಾಗಿಸುವ’ ಮಾರ್ಗ
(ಚಿತ್ರ ಸೆಲೆ: mindfulmuscle.com)
ಕವಿತೆ ಮತ್ತು ಕವಿತೆಗೆ ಸೂಕ್ತವಾದ ಚಿತ್ರ ಎರಡು ಉತ್ತಮವಾಗಿ ಮೂಡಿ ಬಂದಿದೆ. ಧನ್ಯವಾದಗಳು.